ರಾಜ್ಯದಲ್ಲಿ ಮತ್ತೊರ್ವ BJP ಮುಖಂಡನ ಬರ್ಬರ ಹತ್ಯೆ – ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ BSNL ನಿರ್ದೇಶಕರಾಗಿ ನೇಮಕಗೊಂಡಿದ್ದ ಗಿರೀಶ್…..ಕಣ್ಣಿಗೆ ಖಾರದ ಪುಡಿ ಎರಚಿ ಭೀಕರವಾಗಿ ಹತ್ಯೆ

Share to all

ರಾಜ್ಯದಲ್ಲಿ ಮತ್ತೊರ್ವ BJP ಮುಖಂಡನ ಬರ್ಬರ ಹತ್ಯೆ – ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ BSNL ನಿರ್ದೇಶಕರಾಗಿ ನೇಮಕಗೊಂಡಿದ್ದ ಗಿರೀಶ್…..ಕಣ್ಣಿಗೆ ಖಾರದ ಪುಡಿ ಎರಚಿ ಭೀಕರವಾಗಿ ಹತ್ಯೆ

ಕಲಬುರಗಿ –

ರಾಜ್ಯದಲ್ಲಿ ಮತ್ತೊರ್ವ ಬಿಜೆಪಿ ಮುಖಂಡನನ್ನು ಭೀಕರವಾಗಿ ಹತ್ಯೆಯನ್ನು ಮಾಡಲಾಗಿದೆ.ಹೌದು ಕಲಬುರಗಿ
ಸಂಸದ ಉಮೇಶ್​ ಜಾಧವ್ ಬಲಗೈ ಬಂಟನನ್ನು ಬರ್ಬರವಾಗಿ ಹತ್ಯೆಯನ್ನು ಮಾಡಲಾಗಿದೆ.ಕಣ್ಣಿಗೆ ಖಾರದ ಪುಡಿ ಎರಚಿ ಕೊಚ್ಚಿ ಕೊಲೆ ಮಾಡಿದ್ದಾರೆ ದುಷ್ಕರ್ಮಿಗಳು.ಗಿರೀಶ್ ಚಕ್ರ ಬರ್ಬರವಾಗಿ ಹತ್ಯೆಯಾದ ಬಿಜೆಪಿ ಮುಖಂಡರಾಗಿದ್ದು ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಜಮೀನಿನಲ್ಲಿ ಬರ್ಬರವಾಗಿ ಕೊಲೆಯನ್ನು ಮಾಡಲಾಗಿದೆ.ಗಿರೀಶ್ ನನ್ನು​ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಕಲಬುರಗಿ BSNL ಸಲಹಾ ಸಮಿತಿಗೆ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು.ಸಲಹಾ ಸಮಿತಿ‌ ನಿರ್ದೇಶಕ ನೇಮಕ ಹಿನ್ನಲೆ ಪಾರ್ಟಿ ಕೊಡುವುದಾಗಿ ಜಮೀನಿಗೆ ಕರಿಸಿ ಬರ್ಬರ ಕೊಲೆ ಮಾಡಿದ್ದಾರೆ.ಕೊಲೆಗೂ‌ ಮುನ್ನ ಕಣ್ಣಿಗೆ ಖಾರದ ಪುಡಿ ಎರಚಿ ನಂತರ ಬರ್ಬರ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದುಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧವನ್ನು ನಡೆಸಿದ್ದಾರೆ.


Share to all

You May Also Like

More From Author