ನಿಷೇಧಿತ ಪ್ಲಾಸ್ಟಿಕ್ ಅಭಿಯಾನ.ಬೆಚ್ಚಿ ಬಿದ್ದ ಪ್ಲಾಸ್ಟಿಕ್ ದಂಧೆಕೋರರು.ಅಂಗಡಿ ಬಂದ್.ದಂಧೆ ಬಂದ್.ಮುಂದೇನು..?

Share to all

ನಿಷೇಧಿತ ಪ್ಲಾಸ್ಟಿಕ್ ಅಭಿಯಾನ.ಬೆಚ್ಚಿ ಬಿದ್ದ ಪ್ಲಾಸ್ಟಿಕ್ ದಂಧೆಕೋರರು.ಅಂಗಡಿ ಬಂದ್.ದಂಧೆ ಬಂದ್.ಮುಂದೇನು..?

ಹುಬ್ಬಳ್ಳಿ:-ಛೋಟಾ ಮುಂಬೈ ಖ್ಯಾತಿಯ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ದಂಧೆಗೆ ಕಡಿವಾಣ ಯಾವಾಗ ಅನ್ನೋ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಲೇ ಇದೆ.

ಯಾವಾಗ ಯಾವಾಗ ನಿಷೇಧಿತ ಪ್ಲಾಸ್ಟಿಕ್‌ ಹುಬ್ಬಳ್ಳಿಯಲ್ಲಿ ಬ್ಯಾನ್ ಆಗಬೇಕೆಂಬ ಕೂಗೆದ್ದಾಗ ಮಾತ್ರ ಮಹಾನಗರ ಪಾಲಿಕೆಯ ಅಧಿಕಾರಿಗಳು ನಾವು ರೇಡ್ ಗೆ ಬರಾಕ ಹತ್ತೇವಿ ಅಂತಾ ದಂಧೆಕೋರರಿಗೆ ಪೋನ್ ಮಾಡಿ ಹೇಳಿ ರೇಡ್ ಗೆ ಬಂದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎನ್ನುವಂತೆ ರಸ್ತೆ ಬದಿಯ ವ್ಯಾಪಾರಿಗಳನ್ನು ಹಿಡಿದು ಒಂದೆರಡು ಕೇಸ್ ಹಾಕಿ ಮನೆಗೆ ಹೋಗುತ್ತಿದ್ದರು.

ಆದರೆ ಈಗ ಹುಬ್ಬಳ್ಳಿ-ಧಾರವಾಡದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬ್ಯಾನ್ ಆಗಲೇ ಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಮಂಜುನಾಥ ಲೂತಿಮಠ ನೇತೃತ್ವದಲ್ಲಿ ಅಭಿಯಾನ ಆರಂಭಗೊಂಡಿದೆ.ಈ ಅಭಿಯಾನಕ್ಕೆ ಬೆಚ್ಚಿ ಬಿದ್ದ ದಂಧೆಕೋರರು ಇಂಗು ತಿಂದ ಮಂಗನಂತಾಗಿದ್ದಾರೆ.

ಈ ಒಂದು ಅಭಿಯಾನಕ್ಕೆ ಮಹಾನಗರ ಪಾಲಿಕೆಯ ಅಧಿಕಾರಿಗಳು ತಮ್ಮ ಕಳ್ಳಾಟ ಬಿಟ್ಟು ಕೈ ಜೋಡಿಸಬೇಕಿದೆ.ಕೈ ಜೋಡಸ್ತಾರಾ ಕೈ ಕೊಡತಾರ ಕಾದು ನೋಡ ಬೇಕಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ ಆರಂಭ ಮಾಡಿರುವ ಈ ಪ್ಲಾಸ್ಟಿಕ್ ಬ್ಯಾನ್ ಅಭಿಯಾನ ಅರ್ಧಕ್ಕೆ ನಿಲ್ಲದೇ ಮುಂದುವರೆಯಲಿ ಎನ್ನುವುದು ಉದಯ ವಾರ್ತೆಯ ಕಳ ಕಳಿ..

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author