ದೇಶಕ್ಕೆ ಮೋದಿ ಧಾರವಾಡಕ್ಕೆ ಜೋಶಿ ಪ್ರಚಾರಕ್ಕಿಳಿದ ಬಿಜೆಪಿ ಪಡೆ. ಕಾರಿಗೆ ಸ್ಟಿಕರ್ ಹಾಕಿ ಪ್ರಚಾರ ಆರಂಭಿಸಿ ಅನೂಪಕುಮಾರ.
ಹುಬ್ಬಳ್ಳಿ:-ಧಾರವಾಡ ಲೋಕಸಭಾ ಅಬ್ಯೆರ್ಥಿ ಸಚಿವ ಪ್ರಹ್ಲಾದ ಜೋಶಿ ಅವರ ಪ್ರಚಾರವನ್ನು ಅವರ ಯುವ ಪಡೆ ಸದ್ದಿಲ್ಲದೇ ಆರಂಭಿಸಿದೆ.ಧಾರವಾಡ ಲೋಕಸಭೆ ಕ್ಷೇತ್ರದಾದ್ಯಂತ ಈ ಬಾರೀ ಅತೀ ಹೆಚ್ಚು ಮತಗಳಿಂದ ಜೋಶಿ ಅವರನ್ನು ಆಯ್ಕೆ ಮಾಡಲು ಬಿಜೆಪಿ ಯುಚ ಪಡೆ ಟೊಂಕಕಟ್ಟಿ ನಿಂತಿದೆ.
ಅದಕ್ಕೆ ಸಾಕ್ಷಿ ಎಂಬಂತೆ ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಮಂಡಳ ಅದ್ಯಕ್ಷ ಅನೂಪ ಕುಮಾರ ಬಿಜವಾಡ ತನ್ನ ಹೊಸ ಕಾರಿಗೆ ದೇಶಕ್ಕೆ ಮೋದಿ ಧಾರವಾಡಕ್ಕೆ ಜೋಶಿ ಎಂಬ ಸ್ಟಿಕರ್ ಅಂಟಿಸಿಕೊಂಡು ಪ್ರಚಾರ ಆರಂಭಿಸಿದ್ದಾರೆ.ಕ್ಷೇತ್ರದಲ್ಲಿ ಇಂತಹ ನೂರಾರು ಯುವಕರ ಪಡೆ ಸ್ವಯಂ ಪ್ರೇರಣೆಯಿಂದ ಜೋಶಿಯವರ ಪ್ರಚಾರಕ್ಕಿಳಿದೆವೆ.