ಮಗನಿಂದಲೇ ತಂದೆಯ ಹತ್ಯೆ.ಕುಡಿದ ಅಮಲಿನಲ್ಲಿ ತಂದೆಯನ್ನೇ ಬ್ರಿಜ್ ಮೇಲಿಂದ ಕೆಳಗೆ ನೂಕಿ ಕೊಲೆ.
ಹುಬ್ಬಳ್ಳಿ:- ಧಾರವಾಡದಲ್ಲಿ ಮಗನಿಂದ ತಾಯಿ ಕೊಲೆ ಮಾಸುವ ಮುನ್ನವೇ ಮಗನಿಂದ ತಂದೆಯ ಕೊಲೆ ಮಾಡಿದ ಘಟನೆ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿಯಲ್ಲಿ ನಡೆದಿದೆ.
ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಗ ಮೈಲಾರಿ (22) ತನ್ನ ತಂದೆಯನ್ನು ಮನೆಯ ಸಮೀಪ ಬ್ರಿಜ್ ವೊಂದರ ಮೇಲಿಂದು ದೂಡಿ ಕೊಲೆ ಮಾಡಿದ್ದಾನೆ.ಮೃತನನ್ನು ಸಿದ್ಧಪ್ಪ ಭರಮಣ್ಣವರ ಎಂದು ಗುರುತಿಸಲಾಗಿದೆ.
ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ ಗ್ರಾಮೀಣ ಪಿಆಯ್ ಮುರಗೇಶ ಚನ್ನಣ್ಣವರ ಆರೋಪಿ ಮೈಲಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.