ಮದುವೆ ಮನೆಯಲ್ಲಿ ಕಳ್ಳರ ಕೈ ಚಳಕ.ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ,ಲಕ್ಷಾಂತರ ರೂಪಾಯಿ ಕಳ್ಳತನ.

Share to all

ಮದುವೆ ಮನೆಯಲ್ಲಿ ಕಳ್ಳರ ಕೈ ಚಳಕ.ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ,ಲಕ್ಷಾಂತರ ರೂಪಾಯಿ ಕಳ್ಳತನ.

ಧಾರವಾಡ: ಹು-ಧಾ ಮುಖ್ಯ ರಸ್ತೆಯ ಸಂಜೀವಿನಿ ಗಾರ್ಡನ್ ಬಳಿಯಿರುವ ಐಷಾರಾಮಿ ಹೊಟೇಲ್ ನಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮದಲ್ಲಿ ಕಳ್ಳರು ಲಕ್ಷಾಂತರ ರೂ. ಮೌಲ್ಯದ ವಜ್ರ, ಚಿನ್ನ ಸಹಿತ ನಗದನ್ನು ದೋಚಿ ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ‌.

ಓಶಿಯನ್ ಪರ್ಲ್ ಎಂಬ ಹೊಟೇಲ್ ನಲ್ಲಿ ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಗಂಗಾಧರಪ್ಪ ಪಟ್ಟಣಶೆಟ್ಟಿ ಎಂಬುವವರ ಪುತ್ರನಾದ ಡಾ. ಶರಣಪ್ಪ ಹಾಗೂ ಹುಬ್ಬಳ್ಳಿ ಅಧ್ಯಾಪಕನಗರದ ಅರುಣಕುಮಾರ್ ಗಿರಿಯಾಪುರ ಅವರ ಪುತ್ರಿ ಡಾ. ಪೂಜಾ ಅವರ ಮದುವೆಯ ಕಾರ್ಯಕ್ರಮದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಮದುವೆ ಸಂಭ್ರಮದಲ್ಲಿದವರಿಗೆ ಚಳ್ಳೆ ಹಣ್ಣು ತಿನ್ನಿಸಿದ ಕಳ್ಳರು ಸುಮಾರು ೮೦೦ ಗ್ರಾಂ ಚಿನ್ನ, ಲಕ್ಷಾಂತರ ರೂ. ಮೌಲ್ಯದ ವಜ್ರ ಹಾಗೂ ಅಂದಾಜು ೫೦ ಲಕ್ಷ ರೂಪಾಯಿ ನಗದನ್ನು ತನ್ನ ಬ್ಯಾಗಿನಲ್ಲಿ ಹಾಕಿಕೊಂಡು ಹೋಗುವ ದೃಶ್ಯ ಸೆರೆಯಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಧಾರವಾಡ ವಿದ್ಯಾಗಿರಿ ಠಾಣೆಯ ಪೊಲೀಸರು ಪ್ರಕರಣದ ಕುರಿತು ವಿಷಯ ಸಂಗ್ರಹ ಮಾಡುತ್ತಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.

ಉದಯ ವಾರ್ತೆ ಧಾರವಾಡ


Share to all

You May Also Like

More From Author