ಸಂಪಿನಲ್ಲಿ ಮುಳುಗಿದ ಮಗುವನ್ನು ಸಮಯಕ್ಕೆ ಸರಿಯಾಗಿ ರಕ್ಷಿಸಿದ ಆಪತ್ಭಾಂದವ.
ಬೆಂಗಳೂರು:ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ನಾಗರಾಜ ಎ. ಆರ್ ರವರು ಮದ್ಯಾಹ್ನ 03:30 ರ ಸಮಯದಲ್ಲಿ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಲು ಬರುತ್ತಿದ್ದ ಸಮಯದಲ್ಲಿ ಬ್ಯಾಡರಹಳ್ಳಿಯ ವಿಶ್ವೇಶ್ವರಯ್ಯ ಲೇಔಟ್ ನ ಬಳಿ ಜನಸ್ತೋಮ ಸೇರಿದ್ದು, “ಮಗು ಸಂಪ್ ಒಳಕ್ಕೆ ಬಿದ್ದು ಪ್ರಾಣ ಬಿಡುತ್ತಿದೆ….ಕಾಪಾಡಿ, ಕಾಪಾಡಿ” ಎಂದು ಸಾರ್ವಜನಿಕರ ಕೂಗು ಕೇಳಿಸಿಕೊಂಡು ಸ್ಥಳಕ್ಕೆ ಧಾವಿಸಿದ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯ ಪಿ.ಎಸ್.ಐ ಆದಂತಹ ಶ್ರೀ ನಾಗರಾಜ ಎ.ಆರ್. ಸ್ವಲ್ಪ ತಡವಾಗಿದ್ದರೂ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸುಮಾರು 10 ಅಡಿ ಆಳದ ಸಂಪ್ ಒಳಗೆ ನೀರಿನಲ್ಲಿ ಮುಳುಗಿದ್ದ 2 ವರ್ಷ 6 ತಿಂಗಳ ಮಗುವಿನ ಪ್ರಾಣ ರಕ್ಷಿಸಿ ಆಸ್ಪತ್ರೆಗೆ ಸೇರಿಸಿ ಮಗುವಿನ ಪ್ರಾಣ ಉಳಿಸಿದ್ದಾರೆ…
ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ. ನಾಗರಾಜ. ಎ. ಆರ್. ರವರು ಇಲಾಖೆಗೆ ಹೆಮ್ಮೆ ತರುವಂತಹ ಅತ್ಯುತ್ತಮ ಕೆಲಸವನ್ನು ಮಾಡಿದ್ದಾರೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.