ಕೆರೆಯಲ್ಲಿ ಮುಳುಗಿ ತಾಯಿ ಮಗ ಸಾವು.ತಾಯಿ ಮಗನ ಸಾವಿನ ಹಿಂದೆ ಸಂಶಯದ ಹುತ್ತ.ಕೌಟುಂಬಿಕ ಕಲಹ ಇಬ್ಬರ ಸಾವಿಗೆ ಕಾರಣವಾಯಿತೇ..?
ಕೋಲಾರ:-ಕೆರೆಯಲ್ಲಿ ಮುಳುಗಿ ತಾಯಿ ಮಗ ಸಾವನ್ನಪ್ಪಿದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.ಗೀತಾ (25) ಯಶವಂತ (6) ಮೃತರು ಎಂದು ಗುರುತಿಸಲಾಗಿದೆ.
ಮೃತರು ಕೋಡಿಪಲ್ಲಿ ಗ್ರಾಮದ ಸಂಬಂಧಿಕರ ಮನೆಗೆ ಬಂದ ವೇಳೆ ಘಟನೆ ಸಂಭವಿಸಿದೆ.ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ಗೌನಿಪಲ್ಲಿ ಪೋಲೀಸರು ತನಿಖೆ ನಡೆಸಿದ್ದಾರೆ.