ಹುಬ್ಬಳ್ಳಿಯಲ್ಲಿ ತಪ್ಪಿದ ಗ್ಯಾಂಗ್ ವಾರ್, ಕೂದಲೆಳೆಯ ಅಂತರದಲ್ಲಿ ರೌಡಿ ಶೀಟರ್ ಪಾರು
ಹುಬ್ಬಳ್ಳಿ : ಶಿವರಾತ್ರಿ ಸಂಭ್ರಮದಲ್ಲಿ ಇದ್ದ ಹುಬ್ಬಳ್ಳಿಯ ಜನತೆಯ ಮದ್ಯೆ ಕಳೆದ ರಾತ್ರಿ ದೊಡ್ಡ ಗ್ಯಾಂಗ್ ವಾರ್ ತಪ್ಪಿದ್ದು. ಹತ್ತಾರು ಜನ ರೌಡಿಗಳು ಓರ್ವ ರೌಡಿ ಶೀಟರ್ ಮೇಲೆ ತಲವಾರು ಬೀಸಿದ್ದಾರೆ ಆದ್ರೆ ಅದೃಷ್ಟವಶಾತ್ ಆತ ಪಾರಾಗಿದ್ದು ಕೂಡಲೇ ಪೊಲೀಸರ ಬಳಿ ರಕ್ಷಣೆಗೆ ಧಾವಿಸಿ ತನ್ನ ಮೇಲೆ ದಾಳಿ ನಡೆಸಿದವರ ಮೇಲೆ ದೂರು ದಾಖಲು ಮಾಡಿದ್ದಾನೆ.
ಹೌದು ಕಳೆದ ಕೆಲ ದಿನಗಳ ಹಿಂದೆ ಅಷ್ಟೇ ಅಂಜುಮನ್ ಚುನಾವಣೆಯಲ್ಲಿ ಜಯಬೇರಿ ಬಾರಿಸಿ ಅಂಜುಮನ್ ಕಮೀಟಿ ಆಸ್ಪತ್ರೆಯ ಸದಸ್ಯತ್ವ ಪಡೆದಿರುವ ರೌಡಿ ಶೀಟರ್ ದಾವೂದ್ @MD ಮೇಲೆ ರೌಡಿಗಳು ದಾಳಿ ಮಾಡಿದ್ದಾರೆ.ಬೈಕ್ ಮೇಲೆ ಅಂಜುಮನ್ ಆಸ್ಪತ್ರೆಯ ಬಳಿ ತೆರಳುತ್ತಿದ್ದಾಗ ಆಟೋ ಹಾಗೂ ಬೈಕ್ ಗಳಲ್ಲಿ ಬಂದ ಆಗುಂತಕರು ಕಣ್ಣಿಗೆ ಕಾರದ ಪುಡಿ ಎರಚಿ ತಲವಾರು ಬೀಸಿದ್ದಾರೆ.
ಬೈಕ್ ಓಡಿಸಿಸುತ್ತಿದ್ದ ದಾವೂದ್ ಆಪ್ತ ಎದೆಗುಂದದೆ ಬೈಕ್ ಮುನ್ನುಗ್ಗಿಸೀ ಪಾರಾಗಿದ್ದು ಸದ್ಯ ಹುಬ್ಬಳ್ಳಿಯ ಟೌನ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು ಸ್ಥಳೀಯ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.