ವಿಶ್ವ ಮಹಿಳಾ ದಿನ. ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ವಿಶಿಷ್ಟವಾಗಿ ಆಚರಣೆ.
ಬೆಂಗಳೂರು:- ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರ ನೇತೃತ್ವದ ಸಂತೋಷ್ ಲಾಡ್ ಫೌಂಡೇಶನ್ ಒಂದು ವಿನೂತನ, ಅರ್ಥಪೂರ್ಣ ಅಭಿಯಾನದ ಮೂಲಕ ಜನರ ಮನಸ್ಸು ಗೆಲ್ತು.
ಸದಾ ಒಂದಿಲ್ಲೊಂದು ವಿಶೇಷ, ವಿಭಿನ್ನ ಅಷ್ಟೇ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಹೆಸರು ಮಾಡಿರುವ ಸಂತೋಷ್ ಲಾಡ್ ಫೌಂಡೇಶನ್ ಬೀದಿ ಬದಿಯ ಬಡ ಮಹಿಳಾ ವ್ಯಾಪಾರಿಗಳು, ನಿರ್ಗತಿಕ ಮಹಿಳೆಯರು, ಮಹಿಳಾ ಕಾರ್ಮಿಕರು ಇದ್ದ ಸ್ಥಳಗಳಿಗೆ ತೆರಳಿ ಅವರಿಗೆ ಸೀರೆ ಗಳನ್ನು ವಿತರಿಸಿದರು. ಅಷ್ಟೇ ಅಲ್ಲ ಅವರ ಕುಶಲೋಪರಿಯನ್ನು ವಿಚಾರಿಸಿ, ಅವರ ಮುಖದಲ್ಲಿ ಮಂದಹಾಸ ಮೂಡಿಸಿದರು.
ಹೀಗೆ ವಿಶಿಷ್ಟವಾಗಿ ಆಚರಿಸಿದ ಮಹಿಳಾ ದಿನಾಚರಣೆಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನಸ್ಸು ಗೆದ್ದಿದೆ.
https://youtu.be/ul6xJMBqRpI?si=GCNWr1vk2XbpNieU
ಈ ಮೂಲಕ ಸಚಿವ ಸಂತೋಷ್ ಲಾಡ್ ತಮ್ಮ ಮಾನವೀಯ ಕಳಕಳಿಯನ್ನು ಮತ್ತೊಮ್ಮೆ ತೋರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಮಹಿಳೆಯರಿಗೆ ಸೀರೆ ಹಂಚುತ್ತಿರುವ ವಿಡಿಯೋಗಳು ಈಗ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಅಗಿವೆ. ಸಮಾಜದಲ್ಲಿನ ಅಶಕ್ತರ ಹಾಗೂ ಮಹಿಳೆಯರ ಅಭಿವೃದ್ಧಿಗೆ ಹಲವಾರು ವರ್ಷಗಳಿಂದ ಸಂತೋಷ್ ಲಾಡ್ ಫೌಂಡೇಶನ್ ತನ್ನ ನೂತನವಾದ ಕಾರ್ಯಕ್ರಮಗಳ ಮೂಲಕ ಜನ ಮೆಚ್ಚುಗೆಯನ್ನು ಪಡೆಯುತ್ತಿದೆ.