ಉದ್ಘಾಟನೆಗೆ ಸಿದ್ಧಗೊಂಡ ಧಾರವಾಡದ ಸಮರ್ಥಂ ಅಂಗವಿಕಲರ ಸಂಸ್ಥೆ …………
ನಾಳೆ ಧಾರವಾಡದ ಸತ್ತೂರಿನ ವನಶ್ರೀ ನಗರದಲ್ಲಿ ನಿರ್ಮಾಣವಾದ ಸಮರ್ಥಂ ಅಂಗವಿಕಲರ ಸಂಸ್ಥೆಯನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟನೆ ಮಾಡಲಿದ್ದಾರೆ.ತರಭೇತಿ ಮೂಲಕ ಅಂಗವಿಕಲರನ್ನು ಸಬಲೀಕರಣಗೊಳಿಸಿ ಅವರನ್ನು ಉದ್ಯೋಗದಲ್ಲಿ ತೊಡಗಿಸುವ ಕಾರ್ಯದಲ್ಲಿ ಮಗ್ನರಾಗಿರುವ ಈ ಸಂಸ್ಥೆ ಧಾರವಾಡದಲ್ಲಿ ಹದಿಮೂರು ವರ್ಷದಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದ್ದು ಈಗ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ.ಹಳ್ಳಿ ಹಳ್ಳಿಗೆ ಹೋಗಿ ಅಂಗವಿಕಲರನ್ನು ಗುರುತಿಸಿ ಸಂಸ್ಥೆಗೆ ಕರೆತಂದು ಅವರಿಗೆ ಪ್ರೀಯಾಗಿ ಊಟ,ವಸತಿ,ಕಲಿಯಲು ಬೇಕಾದ ಸಾಮಗ್ರಿಗಳನ್ನು ನೀಡಿ ಅವರನ್ನು ಸಬಲೀಕರಣಗೊಳಿಸುವುದೇ ಈ ಸಂಸ್ಥೆಯ ಮುಖ್ಯ ಉದ್ದೇಶ.
ಉದಯ ವಾರ್ತೆ ಧಾರವಾಡ