ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ 1600ಕೆಜಿ ಗಾಂಜಾ ಜಪ್ತಿ.ಬೆಂಗಳೂರು NCB ಅವರಿಂದ ದೊಡ್ಡ ಗಾಂಜಾ seized
ಬೀದರ್:- ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಒಂದು ಲಾರಿ ಲೋಡ್ ಗಾಂಜಾ ಜಪ್ತಿ..ಸ್ಥಳಿಯ ಪೊಲೀಸ್ ಇಲಾಖೆ ಗೆ ಮಾಹಿತಿ ಕೊಡದೇ ಕೆಂದ್ರ ಸರಕಾರದ ತಂಡ ಗಡಿ ಜಿಲ್ಲೆ ಬೀದರ ನಲ್ಲಿ ಕೇಂದ್ರ ಸರ್ಕಾರದ ತಂಡದಿಂದ NCB (narcotics control bureau Bangalore)ಜಿಲ್ಲೆ ಔರಾದ ನಲ್ಲಿ ಭರ್ಜರಿ ಭೇಟೆ..
ಲಾರಿ ನಂಬರ್ TS-07 UL-0972 ನೇದರಲ್ಲಿ ಒರಿಸ್ಸಾದಿಂದ ವಾಯಾ ಕರ್ನಾಟಕ ಮುಖಾಂತರ ಮಹಾರಾಷ್ಟ್ರ ರಾಜ್ಯಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದಾರೆಂದು ಖಚಿತ ಮಾಹಿತಿ ಮೇರೆಗೆ NCB(narcotics contral bureau-bangalore) ಕೇಂದ್ರ ಸರ್ಕಾರದ ತಂಡದವರು ಲಾರಿ ಅನ್ನು ಜಪ್ತಿ ಮಾಡಿ ಭರ್ಜರಿ ಭೇಟೆ ಆಡಿದ್ದಾರೆ.. NCB ತಂಡ ಪರಿಶೀಲಿಸಿ ಲಾರಿಯಲ್ಲಿ ಸುಮಾರು *1600* ಕೆಜಿ ಅಕ್ರಮ ಗಾಂಜಾ ಪಾಕೆಟ್ಟುಗಳು ಕಂಡುಬಂದಿದ್ದು ಸದರಿ ಪ್ರಕರಣದಲ್ಲಿ ಇಬ್ಬರು ಆರೋಪಿಗಳಾದ ಲಾರಿಯ ಡ್ರೈವರ್, ಕ್ಲೀನರ್ ರವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿರುತ್ತಾರೆ.