ಕಾರು ಟಿಪ್ಪರ ನಡುವೆ ಡಿಕ್ಕಿ.ಟಿಪ್ಪರನೊಳಗೆ ಸಿಲುಕಿಕೊಂಡ ಕಾರು.ಬದುಕಿದ ಬಡ ಜೀವ.
ಹುಬ್ಬಳ್ಳಿ: ಕಾರು ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ, ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ ಘಟನೆ ಹುಬ್ಬಳ್ಳಿ ಧಾರವಾಡ ಬೈಪಾಸ್ ಬಳಿ ನಡೆದಿದೆ.
ಬೆಳಗಾವಿಯತ್ತ ಹೊರಟ ಕಾರ ಚಾಲಕರಿಗೆ ಟಿಪ್ಪರ್ ಏಕಾಏಕಿ ಬಂದು ಕಾರಿಗೆ ಬಂದು ಡಿಕ್ಕಿ ಹೊಡೆದಿದ್ದ ಪರಿಣಾಮ, ಕಾರಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರು ಯಾರು ಎಂದು ತಿಳಿದು ಬಂದಿಲ್ಲಾ.