ಹಾವೇರಿಗೆ ಬರುವಂತೆ ಜಗದೀಶ ಶೆಟ್ಟರಗೆ ಮನವಿ ಮಾಡಿದ ಅಭಿಮಾನಿಗಳು.ಶೆಟ್ಟರ ಮನೆಗೆ ಬಂದು ಹಾವೇರಿಯಿಂದ ಸ್ಪರ್ಧೆ ಮಾಡುವಂತೆ ಒತ್ತಾಯ.
ಹುಬ್ಬಳ್ಳಿ:- ಇಂದು ಅಥವಾ ನಾಳೆ ಲೋಕಸಭೆಯ ಬಿಜೆಪಿ ಅಬ್ಯೆರ್ಥಿಗಳ ಪಟ್ಟಿ ರಿಲೀಸ್ ಆಗಲಿದೆ.ಅದರಲ್ಲೂ ಮಾಜಿ ಸಿಎಂ ಜಗದೀಶ ಶೆಟ್ಟರ ಲೋಕಸಭೆಗೆ ಸ್ಪರ್ಧಿಸುತ್ತಾರೆ.ಆದರೆ ಧಾರವಾಡ,ಹಾವೇರಿ,ಬೆಳಗಾವಿ ಎಲ್ಲಿ ಅಂತಾ ಗೊತ್ತಿಲ್ಲಾ.
ಈ ಮದ್ಯೆ ಇಂದು ಹುಬ್ಬಳ್ಳಿಯ ಜಗದೀಶ.ಶೆಟ್ಟರ ಮನೆಗೆ ಹಾವೇರಿಯಿಂದ ಬಂದ ಶೆಟ್ಟರ ಅಭಿಮಾನಿಗಳು ಅವರನ್ನು ಹಾವೇರಿ ಕ್ಷೇತ್ರಕ್ಕೆ ಬರಬೇಕು ಹಾವೇರಿಯಿಂದ ಸ್ಪರ್ಧಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಮದ್ಯೆ ಮಾತನಾಡಿದ ಜಗದೀಶ.ಶೆಟ್ಟರ ನಾನು ಘರ್ ವಾಪಾಸ್ಸಿ ಆದ ಬಳಿಕ ಯಾವ ಕ್ಷೇತ್ರವನ್ನೂ ಕೇಳಿಲ್ಲ.ಪಕ್ಷದ ತೀರ್ಮಾನವೇ ಅಂತಿಮ.ಹಾವೇರಿ ಬೆಳಗಾವಿಯಿಂದ ನನ್ನು ಕರೀತಿದ್ದಾರೆ.ಆದರೆ ಧಾರವಾಡಕ್ಕೆ ಬಹಳ ಜನ ಕರೀತಿದ್ದಾರೆ.ಈ ಹಿಂದೆ ಮೂರು ಬಾರಿ ಲೋಕಸಭೆಯ ಅವಕಾಶ ಬಂದರೂ ಹೋಗಿರಲಿಲ್ಲಾ.ಆದರೆ ಈಗ ಬಹಳ ಜನರ ಒತ್ತಡವಿದೆ.ಪಕ್ಷದ ನಾಯಕರು ಹೇಳಿದ್ರೆ ಸ್ಪರ್ದೆಗೆ ಸಿದ್ದ ಎಂದಿದ್ದಾರೆ.