ಆಯುಕ್ತರಿಂದ ಬೆಳ್ಳಂ ಬೆಳೆಗ್ಗೆ ಸಿಟಿ ರೌಂಡ್ಸ್.ಸ್ವಚ್ಛತಾ ಕ್ರಮದ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ.
ಹುಬ್ಬಳ್ಳಿ:-ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯಕ್ತರು ಇಂದು ಬೆಳ್ಳಂ ಬೆಳಿಗ್ಗೆ ಅಧಿಕಾರಿಗಳ ಛಳಿ ಬಿಡಿಸಿದ್ದಾರೆ.ಹುಬ್ಬಳ್ಳಿಯ ವಲಯ ಕಛೇರಿ 6 ರ ವ್ಯಾಪ್ತಿಯಲ್ಲಿ ಸಂಚರಿಸಿ ಅಧಕಾರಿಗಳಿಗೆ ಸ್ವಚ್ಚತೆ ವಿಚಾರದಲ್ಲಿ ನಿಷ್ಕಾಳಜಿ ತೋರಿಸದಂತೆ ಎಚ್ಚರಿಕೆ ನೀಡಿದರು.
ವಲಯ ಕಛೇರಿ 6 ರ ವ್ಯಾಪ್ತಿಯ ಕೇಶ್ವಾಪುರ ಮುಖ್ಯ ರಸ್ತೆಯ ಭವಾನಿ ನಗರ,ಎಸ್ ಬಿ ಆಯ್ ಕಾಲೋನಿ,ಆಕೃತಿ ರೋಡ್,ದೇಶಪಾಂಡೆ ಲೇಔಟ್, ಅಶೋಕ ನಗರ ಪ್ರದೇಶಗಳಲ್ಲಿ ಸಂಚರಿಸಿದ ಆಯುಕ್ತರು ರಸ್ತೆ ಅಕ್ಕಪಕ್ಕದ ಕಸದ ರಾಶಿಯನ್ನು ನೋಡಿ ಆರೋಗ್ಯ ನಿರೀಕ್ಷಕರಿಗೆ ಕ್ಲಾಸ್ ತೆಗೆದುಕೊಂಡರು.ಅಲ್ಲದೇ ಸ್ವಚ್ಚತಾ ವಿಷಯದಲ್ಲಿ ವೆರಿ ಸೀರಿಯಸ್ ಆಗಿರಿ ಎಂದು ವಾನ್೯ ಮಾಡಿದರು.
ಈ ಒಂದು ಸಿಟಿ ರೌಂಡ್ಸ್ ನಲ್ಲಿ ವಲಯ ಆಯುಕ್ತರಾದ ಬೇವೂರ.ಹಾಗೂ ಆರೋಗ್ಯ ನಿರೀಕ್ಷಕರು ಸ್ವಚ್ಚತಾ ಕರ್ಮಿಗಳು ಹಾಜರಿದ್ದರು.