ಪ್ರಧಾನಿ ನರೇಂದ್ರ ಮೋದಿಯವರ ವಿವಿಧ ಯೋಜನೆಗಳ ಪುಸ್ತಕಗಳನ್ನು ವಿತರಣೆ ಮಾಡಿದ ಅಣ್ಣಪ್ಪ ಗೋಕಾಕ.ವಾಯುವಿಹಾರಕ್ಕೆ ಬಂದವರಿಗೆ ಟೀ ಶರ್ಟ್ ನೀಡಿ ಕ್ಯಾಲೆಂಡರ್ ಗಳೊಂದಿಗೆ ಸಮಗ್ರ ಮಾಹಿತಿಯ ಬುಕ್ ವಿತರಣೆ ಮಾಡಿದ ಯುವ ಮುಖಂಡ.
ಪ್ರಧಾನಿ ನರೇಂದ್ರ ಮೋದಿಯವರ ವಿವಿಧ ಯೋಜನೆಗಳ ಪುಸ್ತಕಗಳನ್ನು ವಿತರಣೆ ಮಾಡಿದ ಅಣ್ಣಪ್ಪ ಗೋಕಾಕ.ವಾಯುವಿಹಾರಕ್ಕೆ ಬಂದವರಿಗೆ ಟೀ ಶರ್ಟ್ ನೀಡಿ ಕ್ಯಾಲೆಂಡರ್ ಗಳೊಂದಿಗೆ ಸಮಗ್ರ ಮಾಹಿತಿಯ ಬುಕ್ ವಿತರಣೆ ಮಾಡಿದ ಯುವ ಮುಖಂಡ.
ಹುಬ್ಬಳ್ಳಿ :-ಸದಾ ಒಂದಿಲ್ಲೊಂದು ವಿಶೇಷತೆಗಳ ಮೂಲಕ ಪಕ್ಷದ ಸೇವೆಯಲ್ಲಿ ತೊಡಗಿಕೊಂಡಿರುವ ಅಣ್ಣಪ್ಪ ಗೋಕಾಕ ಈಗ ಮತ್ತೊಂದು ವಿಶೇಷವಾದ ಕಾರ್ಯ ಮಾಡಿದ್ದಾರೆ.ಹೌದು ಅಧಿಕಾರ ಇರಲಿ ಇಲ್ಲದಿರಲಿ ಪಕ್ಷಕ್ಕಾಗಿ ತಮ್ಮ ನೆಚ್ಚಿನ ನಾಯಕರಿಗಾಗಿ ಹಗಲಿರುಳು ದುಡಿಯುತ್ತಿರುವ ಅಣ್ಣಪ್ಪ ಗೋಕಾಕ ಅವರು ಈಗ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮತ್ತೊಂದು ವಿಶೇಷವಾದ ಕಾರ್ಯದ ಮೂಲಕ ಪಕ್ಷದ ವರಿಷ್ಠರ ಗಮನ ಸೆಳೆದಿದ್ದಾರೆ.
ಹೌದು ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತಾದ ಮಾಹಿತಿಯ ಪುಸ್ತಿಕೆಗಳನ್ನು ವಿತರಣೆ ಮಾಡಿದರು.ಬೆಳಿಗ್ಗೆ ವಾಯು ವಿಹಾರವನ್ನು ಮಾಡುತ್ತಾ ವಾಕಿಂಗ್ ಬಂದವರಿಗೆ ಬೆಳಗ್ಗೆ ನೆಹರೂ ಮೈದಾನದಲ್ಲಿ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ಕ್ಯಾಲೆಂಡರ್ ಹಾಗೂ ಯೋಜನೆಗಳ ಬುಕ್ ಗಳನ್ನು ವಿತರಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ಕೈಗೊಂಡಿರುವ ಕೆಲಸ ಕಾರ್ಯಗಳನ್ನು ತಿಳಿಸುತ್ತಾ ವಾಯು ವಿಹಾರಿಗೆ ನೀಡಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಆಪ್ತನಾಗಿರುವ ಅಣ್ಣಪ್ಪ ಗೋಕಾಕ ಅವರು ನಗರದಲ್ಲಿ ಈ ಒಂದು ಕಾರ್ಯವನ್ನು ಮಾಡುತ್ತಿದ್ದಾರೆ.
ಪ್ರಹ್ಲಾದ ಜೋಶಿ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಮುಖಂಡ ಅಣ್ಣಪ್ಪ ಗೋಕಾಕ ಅವರು ಸಧ್ಯ ಈ ಒಂದು ಕಾರ್ಯವನ್ನು ನಗರದಲ್ಲಿ ಮಾಡುತ್ತಿದ್ದಾರೆ.ಪುಸ್ತಕೆಗಳೊಂದಿಗೆ,ಟೀ ಶರ್ಟ್ ಸೇರಿದಂತೆ ಹಲವಾರು ವಸ್ತುಗಳನ್ನು ವಿತರಣೆ ಮಾಡುತ್ತಿದ್ದಾರೆ.
ಅಲ್ಲದೇ ದೇಶಕ್ಕೆ ಮೋದಿ ಧಾರವಾಡಕ್ಕೆ ಮತ್ತೊಮ್ಮೆ ಜೋಶಿ ಎನ್ನುತ್ತಾ ಜೋಶಿಯವರ ಪ್ರಚಾರದಲ್ಲಿ ಬಿಜೆಪಿ ಯುವ ಮುಖಂಡ ಅಣ್ಣಪ್ಪ ಗೋಕಾಕ ತೊಡಗಿದ್ದಾರೆ.
ಬಿಜೆಪಿ ಯುವ ಮುಖಂಡ ಅಣ್ಣಪ್ಪ ಗೋಕಾಕ ನೇತೃತ್ವದಲ್ಲಿನ ಈ ಒಂದು ಕಾರ್ಯದಲ್ಲಿ ಅವರೊಂದಿಗೆ ನರಸಯ್ಯ ಬಿಜವಾಡ, ಅಣ್ಣಪ್ಪ ನವಲೂರು,ಪ್ರಹ್ಲಾದ ಗುಡಿಮನಿ,ಪ್ರವೀಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.