12 ಗಂಟೆಯಲ್ಲಿ 120 ಕಿಮೀ ನಡೆದು ಯಲ್ಲಮ್ಮನಿಗೆ ಹರಕೆ ತೀರಿಸಿದ ಯುವಕರಿಗೆ ಗ್ರಾಮದಲ್ಲಿ ಸನ್ಮಾನ.
ಕಲಘಟಗಿ:-ಸಾಮಾನ್ಯವಾಗಿ ಏನಾದರೂ ಒಂದು ಸಾಧನೆ ಮಾಡಬೇಕು ಎಂದರೆ ಸುಲಭದ ಮಾತಲ್ಲ ಹೀಗಿರುವಾಗ ಇಲ್ಲೊಂದಿಬ್ಬರು ಯುವಕರು 12 ಗಂಟೆಯಲ್ಲಿ 120 ಕಿಲೋ ಮೀಟರ್ ನಡೆದು ಹೊಸದೊಂದು ದಾಖಲೆ ಮಾಡಿದ್ದಾರೆ.ಧಾರವಾಡದ ಕಲಘಟಗಿ ತಾಲ್ಲೂಕಿನ ಜಿ ಬಸವನಕೊಪ್ಪ ದಿಂದ ಯಲ್ಲಮ್ಮ ಗುಡ್ಡದವರಿಗೆ ಪಾದಯಾತ್ರೆ ನಡೆಸಿ ಹರಕೆ ತೀರಿಸಿದ್ದಾರೆ.ತಾಲೂಕಿನ ಜಿ ಬಸವನಕೊಪ್ಪ ಗ್ರಾಮದ ಯುವಕರೇ ಸಾಧನೆ ಮಾಡಿದವರಾಗಿದ್ದು ಸಾಧನೆಯೊಂದಿಗೆ ಹೊಸದೊಂದು ದಾಖಲೆ ಮಾಡಿ ಹರಕೆ ತೀರಿಸಿದ್ದಾರೆ.ಹರಕೆಯಂತೆ ಗ್ರಾಮದ ಮಹಾಂತೇಶ್ ಹಾಗೂ ಗಂಗಪ್ಪ ಗಿರೆಪ್ಪಗೌಡ ಎಂಬ ಇಬ್ಬರು ಯುವಕರು ಯಲ್ಲಮ್ಮನಗುಡಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದರು 12 ಗಂಟೆಯಲ್ಲಿ ಗ್ರಾಮದಿಂದ ಹೊರಟ ಇವರು ಯಲ್ಲಮ್ಮನ ಗುಡ್ಡ ತಲುಪಿ ವಾಪಸ್ ಗ್ರಾಮಕ್ಕೆ ಆಗಮಿಸಿ ಸಾಧನೆ ಮಾಡಿದ್ದಾರೆ.11 ಜನ ಯುವಕರಲ್ಲಿ ಮಹಾಂತೇಶ್ ಹಾಗೂ ಗಂಗಪ್ಪ ಗಿರೆಪ್ಪಗೌಡ ಇಬ್ಬರು 12 ಗಂಟೆಯಲ್ಲಿ ದರ್ಶನ ಮುಗಿಸಿ ವಾಪಸ್ ಮರಳಿದ್ದಾರೆ.6 ಗಂಟೆಗೆ ಪಾದಯಾತ್ರೆ ಆರಂಭಿಸಿ ಯಲ್ಲಮ್ಮನ ದರ್ಶನ ಪಡೆದು ಸಂಜೆ ಆರು ಗಂಟೆಗೆ ವಾಪಸ್ ಬರಬೇಕು ಅನ್ನೋ ಷರತ್ತು ಹಾಕಲಾಗಿತ್ತು ಷರತ್ತಿನಂತೆ 11 ಜನ ಯುವಕರಲ್ಲಿ ಇಬ್ಬರು ಯುವಕರು ಯಲ್ಲಮ್ಮನ ದರ್ಶನ ಪಡೆದು ಹರಕೆ ತೀರಿಸಿ ವಾಪಸ್ ಪಾದಯಾತ್ರೆ ಮೂಲಕವೇ ಗ್ರಾಮಕ್ಕೆ ಆಗಮಿಸಿದ ಇಬ್ಬರು ಯುವಕರಿಗೆ ಮಹಾಂತೇಶ ಹಾಗೂ ಗಂಗಪ್ಪ ಅವರಿಗೆ ಗ್ರಾಮಸ್ಥರು ಸನ್ಮಾನವನ್ನು ಮಾಡಿ ಗೌರವಿಸಿದ್ದಾರೆ
ಉದಯ ವಾರ್ತೆ ಕಲಘಟಗಿ