ಪ್ರಹ್ಲಾದ ಜೋಶಿ ಅವರಿಗೆ ಟಿಕೆಟ್ ಘೋಷಣೆ ಬೆನ್ನಲ್ಲೇ ಆ್ಯಕ್ಟಿವ್ ಆದ ಬಿಜೆಪಿ ಕಾರ್ಯಕರ್ತರು.ಬೆಳ್ಳಂ ಬೆಳಿಗ್ಗೆ ಫೀಲ್ಡಿಗಿಳಿದ ಯುವ ಮುಖಂಡ ಅಣ್ಣಪ್ಪ ಗೋಕಾಕ.
ಹುಬ್ಬಳ್ಳಿ :-ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಬ್ಯೆರ್ಥಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಐದನೇ ಬಾರಿಗೆ ದಾಖಲೆ ಮತಗಳ ಅಂತರದಿಂದ ಲೋಕಸಭೆಗೆ ಕಳಿಸಲು ಬಿಜೆಪಿ ಯುವ ಪಡೆ ಸಜ್ಜಾಗಿದೆ.
ಅಧಿಕಾರವಿರಲಿ ಇಲ್ಲದಿರಲಿ ತಮ್ಮ ನಾಯಕನ ಗೆಲುವಿಗೆ ಟೊಂಕಕಟ್ಟಿ ನಿಂತಿರುವ ಬಿಜೆಪಿ ಯುವ ಮುಖಂಡ ಅಣ್ಣಪ್ಪ ಗೋಕಾಕ ಬೆಳ್ಳಂ ಬೆಳಿಗ್ಗೆ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಬಂದಂತಹ ಎರಡನೂರಕ್ಕೂ ಹೆಚ್ಚು ವಾಯು ವಿಹಾರಿಗಳಿಗೆ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಪ್ರಹ್ಲಾದ ಜೋಶಿ ಅವರು ಮಾಡಿದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಪ್ರಚಾರ ನಡೆಸಿದರು.
ಅಲ್ಲದೇ ನಿನ್ನೆ ಕುಂದಗೋಳ ತಾಲೂಕಿನ ಕುಂದಗೋಳ ಪಟ್ಟಣ ಮತ್ತು ದೇವನೂರು ಗ್ರಾಮದ ಹಿಂದುಳಿದ ಜನಾಂಗದ ಮನೆ ಮನೆಗೆ ತೆರಳಿ ದೇಶಕ್ಕೆ ಮತ್ತೊಮ್ಮೆ ಮೋದಿ.ಧಾರವಾಡಕ್ಕೆ ಪ್ರಹ್ಲಾದ ಜೋಶಿ ಅಂತಾ ಪ್ರಚಾರ ನಡೆಸಿದರು.
ಬಿಜೆಪಿ ಯುವ ಮುಖಂಡ ಅಣ್ಣಪ್ಪ ಗೋಕಾಕಗೆ ಬಸವರಾಜ ಇಚ್ಚಂಗಿ,ನೀಲಕಂಠ ತಡಸಮಠದ,ಅಮೃತ ಹಿರೇಮಠ ಸಾಥ್ ನೀಡಿದ್ದಾರೆ.