ನವದೆಹಲಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಚುನಾವಣೆ ಆಯೋಗ ನಾಳೆ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದೆ. ನಾಳೆಯಷ್ಟೇ ಚುನಾವಣೆ ದಿನಾಂಕ ಹಾಗೂ ನೀತಿ ಸಂಹಿತೆ ಜಾರಿಗೆ ಮುಹೂರ್ತ ಫಿಕ್ಸ್ ಆಗುವ ಸಾಧ್ಯತೆ ಹೆಚ್ಚಿದೆ.
ಹೌದು.. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ತಯಾರಿ ನಡೆಸಿ, ಅಭ್ಯರ್ಥಿಗಳ ಪಟ್ಟಿಯ ಜೊತೆಗೆ ಚುನಾವಣೆ ತಯಾರಿ ನಡೆಸಿವೆ. ಈ ನಿಟ್ಟಿನಲ್ಲಿ ಎಲೆಕ್ಷನ್ ಕಮೀಷನ್ ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡಲು ಮುಂದಾಗಿದ್ದು, ಚುನಾವಣೆಯ ಎಲ್ಲ ಮಾಹಿತಿ ನಾಳೆಯಷ್ಟೇ ಹೊರಬೀಳುವ ಸಾಧ್ಯತೆಯಿದೆ.
ಇನ್ನೂ ಕೂಡ ಚುನಾವಣೆ ದಿನಾಂಕ ನಿಗದಿಯಾಗಿಲ್ಲ. ಈ ನಿಟ್ಟಿನಲ್ಲಿ ಬಹು ನಿರೀಕ್ಷಿತ ಚುನಾವಣೆ ದಿನಾಂಕ ನಾಳೆಯೇ ಹೊರಬೀಳಲಿದ್ದು, ಚುನಾವಣೆ ಕಾವು ರಂಗೇರಲಿದೆ.