ದಾಬಾದಲ್ಲಿ ಯುವಕನ ಬರ್ಭರ ಕೊಲೆ.ಕೊಲೆಗೆ ಹಣಕಾಸಿನ ವ್ಯವಹಾರನಾ,ಸರಾಯಿ ಮಾರಾಟನಾ.
ಹುಬ್ಬಳ್ಳಿ:- ಹುಬ್ಬಳ್ಳಿ ಸಮೀಪ ಜಗದೀಶ ದಾಬಾದಲ್ಲಿ ಯುವಕನ ಬರ್ಭರ ಕೊಲೆ ನಡೆದಿದೆ.ಕೊಲೆಗೆ ಕಾರಣ ಮಾತ್ರ ನಿಗೂಢವಾಗಿದ್ದು ಪೋಲೀಸರ ತನಿಖೆಯಿಂದ ಹೊರಬರಬೇಕಾಗಿದೆ.
ಹುಬ್ಬಳ್ಳಿ ಸಮೀಪ ಜಗದೀಶ ದಾಬಾವೊಂದರಲ್ಲಿ 28 ವರ್ಷದ ಸುಧೀರ ಹುಲುಗೂರ ಎಂಬ ಯುವಕನಿಗೆ ಇನ್ನೊಬ್ಬ ಯುವಕ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.ಅಲ್ಲದೇ ಆರೋಪಿಗೂ ಸಹ ಸ್ಥಳೀಯರು ಥಳಿಸಿದ್ದು ಆತನನ್ನೂ ಸಹ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ದಾಬಾದಲ್ಲಿ ನಡೀತಿದೆ ಹಗಲು ರಾತ್ರಿ ಸರಾಯಿ ಮಾರಾಟ.ಈ ಜಗದೀಶ ದಾಬಾದಲ್ಲಿ ಲೈಸನ್ಸ ಇರುವುದು CL-4 ಇಲ್ಲಿ ಕ್ಲಬ್ ಮೆಂಬರಗಳಿಗೆ ಮಾತ್ರ ಸರಾಯಿ ಕೊಡಬೇಕು.ಆದರೆ ಇವರ ಸರಾಯಿ ಮಾರಾಟದ ಅಂಕಿ ಸಂಖ್ಯೆ ಪಡೆದರೆ CL-9 ಕಿಂತಲೂ ಹೆಚ್ಚಿಗಿನೇ ಇದೆ.
ಖಡಕ್ ಪೋಲೀಸ ಇನಸ್ಪೆಕ್ಟರ್ ಇವರ ಅಕ್ರಮ ಸರಾಯಿ ಮಾರಾಟಕ್ಕೆ ಬ್ರೇಕ್ ಹಾಕದೇ ಹೋದರೆ ಇಲ್ಲಿ ದಿನ ನಿತ್ಯ ಸಣ್ಣಪುಟ್ಟ ಗಲಾಟೆಗಳು ನಡದೇ ನಡೆಯುತ್ತಿವೆ. ಈ ಸಣ್ಣಪುಟ್ಟ ಗಲಾಟೆ ಕೊಲೆಯ ಹಂತಕ್ಕೂ ಹೋಗತಿವೆ ಅನ್ನೋದಕ್ಕೆ ಈ ಕೊಲೆಯೇ ಸಾಕ್ಷಿ.