ಪ್ರಧಾನಿ ಮೋದಿ ಕ್ಯಾಲೆಂಡರ್ ವಿತರಿಸಿದ ಯುವ ಮುಖಂಡ ಅಣ್ಣಪ್ಪ ಗೋಕಾಕ ಆ್ಯಂಡ್ ಟೀಮ್.ಸದ್ಗುರು ಶಿದ್ಧಾರೂಢರ ಮಠದಲ್ಲಿ ಮೂರು ಸಾವಿರ ಕ್ಯಾಲೆಂಡರ್ ವಿತರಣೆ.
ಹುಬ್ಬಳ್ಳಿ :-ಹುಬ್ಬಳ್ಳಿಯ ಸದ್ಗುರು ಶಿದ್ಧಾರೂಢರ ಮಠದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಬ್ಯೆರ್ಥಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಐದನೇ ಬಾರಿಗೆ ದಾಖಲೆ ಮತಗಳ ಅಂತರದಿಂದ ಲೋಕಸಭೆಗೆ ಆಯ್ಕೆಯಾಗಲಿ ಎಂದು ಪೂಜೆ ಸಲ್ಲಿಸಿ ಮೋದೀಜಿ ಅವರ ಯೋಜನೆಗಳ ವಿವರವುಳ್ಳ ಕ್ಯಾಲೆಂಡರ್ ಹಾಗೂ ಪುಸ್ತಕ ವಿತರಿಸಿದರು.
ಸತತ ಒಂದು ವಾರದಿಂದ ಹಳ್ಳಿ ಹಳ್ಳಿ ಹಾಗೂ ಜನದಟ್ಟಣೆ ಇರುವ ಪ್ರದೇಶಗಳಿಗೆ ಹೋಗಿ ದೇಶದ ಪ್ರಧಾನಿ ಹಾಗೂ ತಮ್ಮ ನಾಯಕನ ಗೆಲುವಿಗೆ ಟೊಂಕಕಟ್ಟಿ ನಿಂತಿರುವ ಬಿಜೆಪಿ ಯುವ ಮುಖಂಡ ಅಣ್ಣಪ್ಪ ಗೋಕಾಕ ಜೋಶಿ ಅವರ ಚಿತ್ರಚಿರುವ ಟೀ ಶಟ್೯ ಮೋದಿ ಅವರ ಯೋಜನೆಯ ಕ್ಯಾಲೆಂಡರ್ ,ಪುಸ್ತಕಗಳನ್ನು ಪ್ರಶಿದ್ಧ ಶಿದ್ಧಾರೂಢರ ಮಠದಲ್ಲಿ ವಿತರಣೆ ಮಾಡಲಾಯಿತು.
ಅಲ್ಲದೇ ನಿನ್ನೆ ಇಂದಿರಾ ಗಾಜಿನ ಮನೆಯಲ್ಲಿ ವಾಯು ವಿಹಾಹರಿಗಳಿಗೆ ಮತ್ತು ಕುಂದಗೋಳ ತಾಲೂಕಿನ ಕುಂದಗೋಳ ಪಟ್ಟಣ ಮತ್ತು ದೇವನೂರು ಗ್ರಾಮದ ಹಿಂದುಳಿದ ಜನಾಂಗದ ಮನೆ ಮನೆಗೆ ತೆರಳಿ ದೇಶಕ್ಕೆ ಮತ್ತೊಮ್ಮೆ ಮೋದಿ.ಧಾರವಾಡಕ್ಕೆ ಪ್ರಹ್ಲಾದ ಜೋಶಿ ಅಂತಾ ಪ್ರಚಾರ ನಡೆಸಿದರು.
ಬಿಜೆಪಿ ಯುವ ಮುಖಂಡ ಅಣ್ಣಪ್ಪ ಗೋಕಾಕಗೆ ಬಸವರಾಜ ಇಚ್ಚಂಗಿ,ನೀಲಕಂಠ ತಡಸಮಠದ,ಅಮೃತ ಹಿರೇಮಠ ಸಾಥ್ ನೀಡಿದ್ದಾರೆ.