ಪುನೀತ್ ರಾಜಕುಮಾರ 49 ನೇ ಹುಟ್ಟುಹಬ್ಬ.ವಿಕಲಚೇತನ ಮಕ್ಕಳಿಗೆ ಊಟ ಮಾಡಿಸುವ ಮೂಲಕ ಆಚರಣೆ.
ಹುಬ್ಬಳ್ಳಿ:-ಸಾಧನೆ ಮಾಡಬೇಕು ಎನ್ನುವುದು ಏನೂ ಇಲ್ಲಾ.ಸರಳತೆಯಿಂದ ಇದ್ದು,ಒಳ್ಳೆಯದನ್ನು ಮಾಡತಾ ಹೋದರೆ ಅದೇ ಒಂದು ದೊಡ್ಡ ಸಾಧನೆ ಅಂತಾ ಹೇಳಿದ ಪುನೀತ್ ರಾಜಕುಮಾರ ಅವರ 49 ನೇ ಹುಟ್ಟುಹಬ್ಬವನ್ನು ಹುಬ್ಬಳ್ಳಿಯಲ್ಲಿ ವಿಶಿಷ್ಟವಾಗಿ ಆಚರಿಸಿದ್ದಾರೆ.
ಹುಬ್ಬಳ್ಳಿಯ ವಿಜಯ ಬಾಗೇವಾಡಿ ಅವರ ಗೆಳೆಯರ ಬಳಗ ಹಾಗೂ ಅಪ್ಪು ಯೂತ್ ಬ್ರಿಗೇಡ್ ಅಭಿಮಾನಿಗಳು ಸೇರಿ ಗಬ್ಬೂರ ಅಂಗವಿಕಲ ಶಾಲೆಯಲ್ಲಿ ಎಪ್ಪತ್ತಕ್ಕೂ ಹೆಚ್ಚು ಮಕ್ಕಳಿಗೆ ಬಟ್ಟೆ ನೀಡಿ, ಊಟ ಮಾಡಿಸುವ ಮೂಲಕ ಅಪ್ಪು ಅವರ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ.
ಉಚಿತ ಶಾಲೆ,ಗೋಶಾಲೆ,ಅಂಗವಿಕಲ ಮಕ್ಕಳ ಶಾಲೆಗಳನ್ನು ನಡೆಸುವ ಮೂಲಕ ಸರಳತೆಗೆ ಹೆಸರಾಗಿದ್ದ ಅಪ್ಪು ಅವರ ಹುಟ್ಟುಹಬ್ಬವನ್ನು ಅಣ್ಣಪ್ಪ ಗೋಕಾಕ ನೇತೃತ್ವದಲ್ಲಿ ಸರಳತೆಯಿಂದ ಆಚರಿಸಲಾಯಿತು.