ಟಿಕೆಟ್ ಘೋಷಣೆ ಆಗೋವರೆಗೂ ಏನೂ ಹೇಳಕ್ಕಾಗಲ್ಲ.ಟಿಕೆಟ್ ಸಿಗೋ ವಿಶ್ವಾಸವಿದೆ ಜಗದೀಶ ಶೆಟ್ಟರ.
ಹುಬ್ಬಳ್ಳಿ:- ಬೆಳಗಾವಿ ಟಿಕೆಟ್ಟೂ ಡೌಟ್ ಎಂದು ಅರಿತ ಮಾಜಿ ಸಿಎಂ ಜಗದೀಶ ಶೆಟ್ಟರ ದಿಡೀರನೇ ದೆಹಲಿಗೆ ತೆರಳಿ ವಾಪಾಸ್ಸು ಇಂದು ಹುಬ್ಬಳ್ಳಿಗೆ ಬಂದಾಗ ಎಂದಿನಂತೆ ಜೋಶ್ ಇರಲಿಲ್ಲಾ.ಟಿಕೆಟ್ ಸಿಗೋ ವಿಶ್ವಾಸವಿದೆ.ಆದರೆ ಟಿಕೆಟ್ ಘೋಷಣೆ ಆಗೋವರೆಗೂ ಏನೂ ಹೇಳಕ್ಕಾಗಲ್ಲ ಎಂದು ಜಗದೀಶ ಶೆಟ್ಟರ ಹೇಳಿದ್ದಾರೆ.
ಮೂರು ದಿನಗಳಿಂದ ದೆಹಲಿಯಲ್ಲಿ ಠಿಕಾಣಿ ಹೂಡಿದ್ದ ಜಗದೀಶ ಶೆಟ್ಟರ ಇಂದು ಮರಳಿ ಹುಬ್ಬಳ್ಳಿಗೆ ಬಂದಾಗ ಮಾತನಾಡಿದ ಅವರು ಇನ್ನೆರಡು ದಿನದಲ್ಲಿ ಟಿಕೆಟ್ ಘೋಷಣೆ ಆಗಬಹುದು.ದೆಹಲಿಯಲ್ಲಿ ಬಿಜೆಪಿ ವರಿಷ್ಟರನ್ನು ಭೇಟಿಯಾಗಿ ಬಂದಿದ್ದೇನೆ.ಭೇಟಿ ಸಮಾಧಾನಕರವಾಗಿದೆ.ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರ ಜೊತೆಗೂ ಮಾತನಾಡಿದ್ದೇನೆ.ಎಲ್ಲರ ಸಹಕಾರದೊಂದಿಗೆ ಚುನಾವಣೆ ಎದುರಿಸುತ್ತೇನೆ.
ಆದರೆ ಟಿಕೆಟ್ ತಪ್ಪಿಸೋ ವಿಚಾರವಾಗಲಿ,ಕೆಲ ಕಡೆ ಟಿಕೆಟ್ ಬದಲಾವಣೆ ಬಗ್ಗೆ ಮಾತನಾಡಲ್ಲಾ ಎಂದು ಜಗದೀಶ ಶೆಟ್ಟರ ಹೇಳಿದರು.