ಸಂಚಾರಿ ಪೋಲೀಸರ ಬಗ್ಗೆ ಬೇಸತ್ತ ಜನ..ಅಕ್ರಮ ಹಣ ವಸೂಲಿ ಮಾಡತಾರಂತೆ ಪೋಲೀಸರು.ಹಾಗಂತ ಸಾಮಾಜಿಕ ಜಾಲತಾಣದಲ್ಲಿ ವೈರಲ್.
ಧಾರವಾಡ:-ಸಾಮಾನ್ಯವಾಗಿ ಪೊಲೀಸರೆಂದರೆ ಹಾಗೆ ಹೀಗೆ ಮಾತನಾಡುವವರು ಇದ್ದೇ ಇರುತ್ತಾರೆ.ಒಳ್ಳೇಯದನ್ನು ಮಾಡಿದರು ಒಂದು ಮಾತು ಕೆಟ್ಟದ್ದನ್ನು ಮಾಡಿದರು ಮತ್ತೊಂದು ಹೀಗಿರುವಾಗ ಏನೇ ಮಾಡಿದರು ಏನಾದರು ಪೊಲೀಸರ ಬಗ್ಗೆ ಸಾರ್ವಜನಿಕರು ಹೇಳೆ ಹೇಳುತ್ತಾರೆ.
ಇದೆಲ್ಲದರ ನಡುವೆ ಅದೇಷ್ಟೋ ಪೊಲೀಸರೆಂದರೆ ಗೌರವ ಇದ್ದೇ ಇರುತ್ತದೆ ಒಬ್ಬರು ಇಬ್ಬರು ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದಾಗಿ ಪೊಲೀಸ್ ಇಲಾಖೆಯ ಎಲ್ಲರೂ ಹೀಗೆ ಅಂತಾ ಮಾತನಾಡಿಕೊಳ್ಳುವರು ಇಂದು ಹೆಚ್ಚಾಗಿರುವಾಗ ಧಾರವಾಡ ಸಂಚಾರಿ ಪೊಲೀಸರ ಬಗ್ಗೆ ಸಾರ್ವಜನಿಕರೊಬ್ಬರು ಬಹಿರಂಗವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಅಕ್ರಮವಾಗಿ ಹಣವನ್ನು ವಸೂಲಿ ಮಾಡುತ್ತಾರೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಹೌದು ಸಂಜೀವ ಹಿರೇಮಠ ಎಂಬುವರು ಈ ಒಂದು ಕುರಿತಂತೆ ತಮ್ಮ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.ಧಾರವಾಡ ಒಲ್ಡ್ ಎಸ್ಪಿ ಆಫೀಸ್ ಸರ್ಕಲ್ ನಲ್ಲಿ ಟ್ರಾಫಿಕ್ ಪೊಲೀಸರು ಅಕ್ರಮವಾಗಿ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿದ್ದು ಈ ಒಂದು ಪೋಸ್ಟ್ ಗೆ ಸಾರ್ವಜನಿಕರು ಕೂಡಾ ಧ್ವನಿಗೂಡಿಸಿದ್ದು ಬಹಿರಂಗವಾಗಿ ಹೀಗೆ ಬರೆದಿರುವ ವಿಚಾರ ದೊಡ್ಡ ಪ್ರಮಾಣದ ಚರ್ಚೆಗೆ ವೇದಿಕೆಯಾಗಿದ್ದು ಈಗಷ್ಟೇ ಠಾಣೆಯ ಇನ್ಸಪೇಕ್ಟರ್ ಆಗಿ ಅಧಿಕಾರವನ್ನು ವಹಿಸಿಕೊಂಡಿರುವ ಶ್ರೀನಿವಾಸ ಮೇಟಿಯವರು ಖಡಕ್ ಅಧಿಕಾರಿಯಾಗಿದ್ದು ಈ ಕೂಡಲೇ ಸಾರ್ವಜನಿಕರೊಬ್ಬರು ಹೀಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬರೆದಿದ್ದು ಇದನ್ನು ಗಂಭೀರವಾಗಿ ತಗೆದುಕೊಂಡು ಪರಿಶೀಲಿಸಿ ಸೂಕ್ತವಾದ ಕ್ರಮವನ್ನು ಕೈಗೊಳ್ಳುವುದು ಅವಶ್ಯಕವಿದೆ.
ಖಡಕ್ ಪೊಲೀಸ್ ಆಯುಕ್ತರೇ ಇದನ್ನು ನೀವು ಕೂಡಾ ಒಮ್ಮೆ ವಿಚಾರಣೆ ಮಾಡಿ ಇಲ್ಲವಾದರೆ ಉದಯ ವಾರ್ತೆ ನ್ಯೂಸ್ ಸೂಕ್ತವಾದ ದಾಖಲೆಗಳೊಂದಿಗೆ ವಸೂಲಿ ಮಾಡಿರುವ ಪೊಲೀಸರ ಮಾಹಿತಿಯನ್ನು ದಾಖಲೆಗಳ ಸಮೇತ ಬಿಚ್ಚಿಡಲಿದೆ.