ಅನೈತಿಕ ಸಂಬಂಧಕ್ಕೆ ಬಿತ್ತು ಜೋಡಿ ಕೊಲೆ.ಜೋಡಿ ಕೊಲೆ ಮಾಡಿ ಎಸ್ಕೇಪ್ ಆದ ಮಗ..?ಹೆತ್ತ ಮಗನಿಂದಲೇ ನಡಿಯಿತಾ ಕೊಲೆ..!
ವಿಜಯಪುರ:-ಇಬ್ಬರು ವಿವಾಹಿತರು ಅನೈತಿಕ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ಇಬ್ಬರನ್ನು ಜಮೀನಿನಲ್ಲಿ ಕೊಲೆ ಮಾಡಿ ಮುಳ್ಳುಕಂಟೆಯಲ್ಲಿ ಶವಗಳನ್ನು ಮುಚ್ಚಿಟ್ಟು ಪರಾರಿಯಾದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಮಾರಡಗಿ ತಾಂಡಾ ಬಳಿ ನಡೆದಿದೆ.
ಕಲ್ಲಪ್ಪ ಕುಂಬಾರ ಹಾಗೂ ಪಾರ್ವತಿ ತಳವಾರ ಎಂಬಿಬ್ಬರು ಕೊಲೆಯಾದವರಾಗಿದ್ದು ಅವರಿಬ್ಬರೂ ಕಳೆದ ಹಲವು ವರ್ಷಗಳಿಂದ ಅನೈತಿಕ ಸಂಬಂಧ ಬೆಳೆಸಿದ್ದರು ಎನ್ನಲಾಗಿದೆ.ಅದನ್ನು ಸಹಿಸದ ಮಗನೇ ಅವರಿಬ್ಬರನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ನಿಡಗುಂದಿ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.