ರಂಗೇರಲಿದೆ ಧಾರವಾಡ ಲೋಕಸಭೆ ಕ್ಷೇತ್ರ.ಕಣಕ್ಕಿಳಿಯಲಿದ್ದಾರಂತೆ ಪ್ರತಿಷ್ಠಿತ ಮಠದ ಸ್ವಾಮೀಜಿಯೊಬ್ಬರು.ಯಾರ ಅವರು..?
ಹುಬ್ಬಳ್ಳಿ:- ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಈಗಾಗಲೇ ಬಿಜೆಪಿ ಅಬ್ಯೆರ್ಥಿ ಪ್ರಹ್ಲಾದ ಜೋಶಿ ಅವರ ಹೆಸರನ್ನು ಘೋಷಣೆ ಮಾಡಿದೆ.ಕಾಂಗ್ರೆಸ್ ಇನ್ನೂ ಅಬ್ಯೆರ್ಥಿಯ ಹೆಸರು ಘೋಷಣೆ ಮಾಡಿಲ್ಲವಾದರೂ ವಿನೋದ ಅಸೂಟಿಗೆ ಪೈನಲ್ ಎನ್ನಲಾಗುತ್ತಿದೆ.
ಆದರೆ ಈಗ ಇವತ್ತಿನಿಂದ ಧಾರವಾಡ ಲೋಕಸಭೆ ಕ್ಷೇತ್ರಕ್ಕೆ ಇಡೀ ಕ್ಷೇತ್ರದ ನಾಡಿಮಿಡಿತವನ್ನು ಅರಿತಿರುವ ಹಾಗೂ ರಾಜ್ಯದ ಉದ್ದಗಲಕ್ಕೂ ಹೆಸರು ಮಾಡಿರುವ ಲಿಂಗಾಯತ ಸ್ವಾಮೀಜಿಯೊಬ್ಬರು ಪಕ್ಷೇತರ ಅಬ್ಯೆರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.
ಧಾರವಾಡ ಲೋಕಸಭಾ ಕ್ಷೇತ್ರದ ಪ್ರಮುಖ ಲಿಂಗಾಯತ ಮುಖಂಡರು ಸ್ವಾಮೀಜಿಯವರನ್ನು ಭೇಟಿಯಾಗಿ ಈಗಾಗಲೇ ಎರಡ್ಮೂರ ಮೀಟಿಂಗ್ ಮಾಡಿ ಅವರನ್ನು ಚುನಾವಣೆಗೆ ನಿಲ್ಲಲು ಸಜ್ಜುಗೊಳಿಸಿದ್ದಾರೆ ಎನ್ನಲಾಗಿದೆ.ಅಲ್ಲದೇ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಿಂತರ ಹೆಂಗೆ ಅಂತಾ ಸ್ವಾಮೀಜಿ ಒಂದು ಸಂಸ್ಥೆಯಿಂದ ಈಗಾಗಲೇ ಸಮೀಕ್ಷೆ ಕೂಡಾ ಮಾಡಿಸಿದ್ದಾರ ಅಂತೆ.
ಆ ಪ್ರತಿಷ್ಠಿತ ಮಠದ ಸ್ವಾಮೀಜಿ ಯಾರು.? ಅವರು ಯಾಕೆ ಚುನಾವಣೆ ಕಣಕ್ಕಿಳಿಯಲಿದ್ದಾರೆ.ಅವರನ್ನೇ ಯಾಕೆ ಪಕ್ಷೇತರ ಅಬ್ಯೆರ್ಥಿಯಾಗಿ ಕಣಕ್ಕಿಳಿಸಲಿದ್ದಾರೆ ಸ್ವಾಮೀಜಿ ಹಿಂದೆ ಇರುವ ನಾಯಕರು ಯಾರು.?ಎಲ್ಲವನ್ನೂ ಉದಯ ವಾರ್ತೆಯಲ್ಲಿ ನಿರೀಕ್ಷಿಸಿ..