ಸ..ಶಿವನಿಗೆ ಅದೇ ಜ್ಞಾನ. ಬಂದಿದ್ದು ಬರಲಿ ಹೋಗಿದ್ದು ಹೋಗಲಿ. “161” ಮಾತ್ರ ಫಿಕ್ಸ್..
ಹುಬ್ಬಳ್ಳಿ:-ಅದು ಪ್ರತಿಷ್ಠಿತ ಏರಿಯಾದಲ್ಲಿರುವ ಹೈಪೈ ಪೋಲೀಸ ಠಾಣೆ.ಅಲ್ಲಿ ಬಂದಿರುವ ಪೋಲೀಸ ಇನಸ್ಪೆಕ್ಟರ್ ಚುನಾವಣೆ ನಿಮಿತ್ಯ ಬಂದವರು.ಅವರಿಗೆ ಯಾರೇನಾದರೂ ಮಾಡಲಿ ಬೇಗ ಚುನಾವಣೆ ಮುಗಿಯಲಿ ಅಂತಾ ನೌಕರಿ ಮಾಡಿ ಹೋಗಿ ಬಿಡತಾರೆ.ಆದರೆ ಅದಲ್ಲ ಸ್ಟೋರಿ.
ಅಲ್ಲಿರುವ ಎರಡು ಸ್ಟಾರಿನ ಅಧಿಕಾರಿಯ ಕರಾಮತ್ತು ಮಾತ್ರ ಯಾರಿಗೂ ಗೊತ್ತೇ ಆಗಲ್ಲ.ಠಾಣೆಗೆ ಯಾರ ಏನೇ ಸಮಸ್ಯೆ ತಂದರೂ ಸಹ ಒಂದು ಅರ್ಜಿ ಬರಿಸಕೋ ಅಂತಾ ಹೇಳದವರೇ ಅಲ್ಲಿಂದ ಆರಂಭವಾಗುತ್ತೇ ಸ…ಶಿವನ ಜ್ಞಾನ.
ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮ ದಂಧೆ ಒಂದಾ ಎರಡಾ ಹೇಳತಾ ಹೋದರೆ ಸಾಲು ಸಾಲು.ಇದೆಲ್ಲದರ ಮದ್ಯೆ ಕೇಶ್ವಾಪುರ ವ್ಯಾಪ್ತಿಯಲ್ಲಿ ಬಡ್ಡಿ ದಂಧೆಯೊಂದು ಎಷ್ಟೋ ಕುಟುಂಬಗಳನ್ನು ಬೀದಿಗೆ ತಂದಿವೆ.ಬಡ್ಡಿ ದಂಧೆಕೋರರ ಬಗ್ಗೆ ಆ ಠಾಣೆಗೆ ದೂರು ಬಂದರೆ ಸಾಕು ತುಪ್ಪ ಬಂದು ಬಾಯಿಗೆ ಬಿದ್ದಾಂಗಾಯ್ತು ಶಿವಾ ಶಿವಾ ಎಂದೇ ಬಿಡ್ತಾರೆ.
ಕೊಲೆ, ಸುಲಿಗೆ,ಕಳ್ಳತನದ ಹಿಂದೆ ಈ ಬಡ್ಡಿ ದಂಧೆಯ ಕರಾಳ ಮುಖವೇ ಕಾರಣ ಈ ಬಡ್ಡಿ ದಂಧೆಗೆ ಕಡಿವಾಣ ಹಾಕಬೇಕಾದ ಪೋಲೀಸರು ಅವರಿಂದಲೇ ಅಷ್ಟೋ ಇಷ್ಟೋ ಪ್ರಸಾದ ಪಡೆದು ಮೇಲಿನವರಿಗೆ ಒಂದಿಷ್ಟು ಕೊಡಿಸಿ ದೂರುದಾರರನ್ನೇ ಹೆದರಿಸಿ ಕಳಿಸುವ ಈ ಪೋಲೀಸರ ಬಗ್ಗೆ ಖಡಕ್ ಪೋಲೀಸ ಕಮೀಷನರ್ ಮೇಡಂ ಒಂದಿಷ್ಟು ಗಮನಹರಿಸಬೇಕಾಗಿದೆ.
ಶಾಂತಿ ನಗರದಲ್ಲಿ ಎಕ್ಕಾ,ರಾಜಾ,ರಾಣಿ ಏನಿದು ಲೀಲೆ ವೀಕ್ಷಿಸಿ… ಉದಯ ವಾರ್ತೆಯಲ್ಲಿ.