ಚುನಾವಣಾ ರೂಲ್ಸ್ ಈ ಹೊಟೆಲ್ ಗೆ ಅನ್ವಯಿಸಲ್ವಾ.ತಡ ರಾತ್ರಿವರೆಗೂ ಇಲ್ಲಿ ಪಾರ್ಟಿಗಳು ನಡೆದರೆ ಪೋಲೀಸ ಹಾಗೂ ಚುನಾವಣಾ ಅಧಿಕಾರಿಗಳು ಗಪ್ ಚುಪ್ ಯಾಕೆ..?
ಹುಬ್ಬಳ್ಳಿ:- 2024 ,ರ ಲೋಕಸಭೆ ಚುನಾವಣೆ ಘೋಷಣೆಯಾದ ಮೇಲೆ ಹೊಟೆಲ್ ಗಳಿಗೆ ಒಂದಿಷ್ಟು ರೂಲ್ಸ್ ಅಂತಾ ಮಾಡಿದೆ
ಆದರೆ ಕೇಶ್ವಾಪುರದಲ್ಲಿರುವ ಈ ಹೊಟೆಲ್ ಗೆ ರೂಲ್ಸ್ ಇಲ್ವಾ.
ನಿನ್ನೆ ರಾತ್ರಿ ತಡ ರಾತ್ರಿವರೆಗೂ ಇಲ್ಲಿ ಮಾರವಾಡಿ ಯುವಕರ ಗುಂಪೊಂದು ಪಾರ್ಟಿ ಮಾಡಿದೆ.ಅಲ್ಲಿ ಸ್ಥಳೀಯ ಪೋಲೀಸರು ಬಂದು ಹೋದರೂ ಏನೂ ಮಾಡಲಿಲ್ಲಾ ಯಾಕೆ.? ಚುನಾವಣಾ ನಿಯಮ ಉಲ್ಲಂಘಿಸುವಷ್ಟು ದೊಡ್ಡವರದೇ ಈ ಹೊಟೆಲ್.
ಕೇಶ್ವಾಪುರ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಒಂದು ಸಮುದಾಯದ ಪ್ರತಿಷ್ಠಿತ ಉದ್ಯಮಿಯ ಮಗ ಡ್ರಗ್ಸ್ ದಂಧೆ ನಡೆಸುತ್ತಿದ್ದಾನೆ ಎಂದು ಇಡೀ ಕೇಶ್ವಾಪುರದ ಜನರಿಗೂ ಗೊತ್ತಂತೆ.ಇಂತಹದರಲ್ಲಿ ತಡ ರಾತ್ರಿವರೆಗೂ ಇಲ್ಲಿ ಪಾರ್ಟಿ ಮಾಡಲಿಕ್ಕೆ ಬಿಡತಾರೆ ಅಂದರೆ ಏನರ್ಥ.ಅಷ್ಟಕ್ಕೂ ಅದು ಯಾರ ಪಾರ್ಟಿ ಅಷ್ಟೊಂದು ಜನ ಸೇರಿದ್ದು ಯಾಕೆ ? ಅನ್ನೋ ಪ್ರಶ್ನೆ ಈಗ ಸಾರ್ವಜನಿಕರಲ್ಲಿ ಕಾಡತಾ ಇದೆ.