ಲಿಂಗಾಯತ ಪಂಚಮಸಾಲಿ ಜಿಲ್ಲಾದ್ಯಕ್ಷರಾಗಿ ಸಂಗೀತಾ ಇಜಾರದ ಆಯ್ಕೆ.ರಾಷ್ಟ್ರೀಯ ಕಾರ್ಯದರ್ಶಿ ನೀಲಕಂಠ ಅಸೂಟಿ ಆದೇಶ.
ಹುಬ್ಬಳ್ಳಿ:- ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಧಾರವಾಡ ಜಿಲ್ಲಾ ಮಹಿಳಾ ಘಟಕದ ಅದ್ಯಕ್ಷೆಯನ್ನಾಗಿ ಸಂಗೀತಾ ಇಜಾರದ ಅವರನ್ನು ಆಯ್ಕೆ ಮಾಡಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ರಾಷ್ಟ್ರೀಯ ಕಾರ್ಯದರ್ಶಿ ನೀಲಕಂಠ ಅಸೂಟಿ ಆದೇಶ ಮಾಡಿದ್ದಾರೆ.
ಸಂಗೀತಾ ಇಜಾರ ಅವರು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಮಂಟೂರ ಗ್ರಾಮದವರಾಗಿದ್ದು ಹಲವು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಸಮಾಜ ಮುಖಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅಲ್ಲದೇ ಸಮಾಜದ ಕೆಲಸಕ್ಕೆ ಹೆಚ್ಚಿನ ಒತ್ತು ಕೊಡುವ ನಿಟ್ಟಿನಲ್ಲಿ ಅವರನ್ನು ಧಾರವಾಡ ಜಿಲ್ಲೆಗೆ ಮಹಿಳಾ ಘಟಕಕ್ಕೆ ನೇಮಕ ಮಾಡಿ ಆದೇಶ ಪತ್ರ ನೀಡಿದ್ದಾರೆ.