ನಾಳೆ ಇನ್ನೂರಕ್ಕೂ ಹೆಚ್ಚು ಸ್ವಾಮಿಗಳನ್ನ ಸೇರಿಸಿ ಲಿಂಗಾಯತರ ಬಲಪ್ರದರ್ಶನಕ್ಕೆ ಸಜ್ಜಾದ ದಿಂಗಾಲೇಶ್ವರ ಸ್ವಾಮಿಗಳು.
ಹುಬ್ಬಳ್ಳಿ:- ಕಳೆದ ಒಂದು ವಾರದಿಂದ ಧಾರವಾಡ ಲೋಕಸಭೆಗೆ ಶಿರಹಟ್ಟಿ ಫಕ್ಕೀರೇಶ್ವರ ಮಠದ ಫೀಠಾಧಿಪತಿ ದಿಂಗಾಲೇಶ್ವರ ಸ್ವಾಮಿಗಳು ಪಕ್ಷೇತರರಾಗಿ ನಿಲ್ಲುತ್ತಾರೆ ಎಂಬ ವದಂತಿ ಬೆನ್ನಲ್ಲೇ ಇಂದು ಪತ್ರಿಕಾಗೋಷ್ಠಿ ಕರೆದಿದ್ದ ದಿಂಗಾಲೇಶ್ವರ ಸ್ವಾಮಿಗಳು ತಮ್ಮ ಗುಟ್ಟ ರಟ್ಟು ಮಾಡಲೇ ಇಲ್ಲ..ಪತ್ರಕರ್ತರ ಪ್ರಶ್ನೆಗೆ ಸ್ವಾಮೀಜಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡಿದ್ರು.ಚುನಾವಣೆಗೆ ಸ್ಪರ್ಧೆ ಮಾಡೋದು ನನ್ನ ಒಬ್ಬನ ನಿರ್ಣಯ ಅಲ್ಲ ಅನ್ಮೋ ಮೂಲಕ ಚುನಾವಣೆಗೆ ನಾನು ರೆಡಿ ಇದೀನಿ ಅನ್ನೋದನ್ನ ಮಾರ್ಮಿಕವಾಗಿ ನುಡಿದರು..
ನಾಳೆ ವರ್ತಮಾನದ ಸಮಸ್ಯೆಗಳ ಕುರಿತು ಚರ್ಚಿಸಲು ಹುಬ್ಬಳ್ಳಿಯ ಮೂರು ಸಾವಿರ ಮಠದ ಶಿವಾನುಭವ ಮಂಟಪದಲ್ಲಿ ನಾಳೆ ಬೆಳಿಗ್ಗೆ 9-30 ಕ್ಕೆ ನಾಡಿನ ವಿವಿಧ ಮಠಾಧೀಶರ ಚಿಂತನ ಮಂಥನ ಸಭೆ ಆಯೋಜಿಸಲಾಗಿದೆ.ಇದು ಹೆಸರಿಗೆ ವರ್ತಮಾನದ ಸಮಸ್ಯೆ,ಆದ್ರೆ ಆ ಸಭೆಯಲ್ಲಿ ಲಿಂಗಾಯತರಿಗೆ ಸ್ಥಾನ ಮಾನ ಸಿಕ್ಕಿಲ್ಲ ಅನ್ನೋದು ಪ್ರಮುಖ ಅಜೆಂಡಾ ಆಗಿರತ್ತೆ ಎನ್ನಲಾಗಿದೆ.ಅಂತರಿಕ ಸಭೆಯಲ್ಲಿ ಸಮಾರು 200 ಕ್ಕೂ ಹೆಚ್ಚು ಮಠಾಧೀಪತಿಗಳು ಭಾಗಿಯಾಗಲಿದ್ದಾರೆ,ಈ ಮೂಲಕ ದಿಂಗಾಲೇಶ್ವರ ಸ್ವಾಮೀಜಿ ನಾಳೆ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.
ಅಷ್ಟಕ್ಕೂ ದಿಂಗಾಲೇಶ್ವರ ಸ್ವಾಮೀಜಿ ಯಾಕೆ ರಾಜಕೀಯದತ್ತ ಮುಖ ಮಾಡಿದ್ರು,ಅನ್ನೋ ಅಸಲಿ ವಿಚಾರ ಇಲ್ಲಿದೆ ನೋಡಿ,ಲಿಂಗಾಯತ ಮಠಾಧೀಶರೊಬ್ಬರನ್ನು ಅವಮಾನಿಸಿದ್ದಾರೆ ಎನ್ನಲಾದ ಓರ್ವ ರಾಜಕಾರಣಿಗೆ ಚುನಾವಣೆಯಲ್ಲಿ ಬುದ್ದಿ ಕಲಿಸಲು ದಿಂಗಾಲೇಶ್ವರ ಸ್ವಾಮೀಜಿಯು ಮುಂದಾಗಿದ್ದಾರೆ ಎನ್ನಲಾಗಿದೆ. ಹಾಗಾದರೆ ದಿಂಗಾಲೇಶ್ವರ ಸ್ವಾಮೀಜಿ ಚುನಾವಣೆಗೆ ನಿಲ್ಲುವ ಮೂಲಕ ಆ ರಾಜಕಾರಿಣಿಗೆ ಬುದ್ದಿಕಲಿಸ್ತಾರಾ ಅಥವಾ ಆ ನಾಯಕನನ್ನು ತಿರಸ್ಕರಿಸುವಂತೆ ಲಿಂಗಾಯತ ನಾಯಕರಿಗೆ ಸೂಚನೆ ಕೊಡತಾರ ಎನ್ನೋದನ್ನ ನಾಳಿನ ಚಿಂತನ ಮಂಥನ ಸಭೆಯಲ್ಲಿ ನಿರ್ಣಯ ವಾಗಲಿದೆ ಎನ್ನಲಾಗಿದೆ.