ಬೆಳಗಾವಿಯಲ್ಲಿಯ ಬಿಜೆಪಿ ಅಸಮಾಧಾನ.ರಾಜಾ ಹುಲಿ ಎಂಟ್ರಿ.ತಣ್ಣಗಾಗದ ಕುಂದಾ ನಗರಿ.
ಬೆಳಗಾವಿ:+ಬಿಜೆಪಿ ಪಾಳಯದ ಅಸಮಧಾನ ಸರಿಪಡಿಸಲು ರಾಜಾಹುಲಿ ಯಡಿಯೂರಪ್ಪ ಬೆಳಗಾವಿಗೆ ಬಂದರೂ ಸಹ ಬೆಳಗಾವಿ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಬುಗಿಲೆದ್ದಿದೆ.
ಇತ್ತಿಚೆಗೆಷ್ಟೆ ಶೆಟ್ಟರ ಗೋ ಬ್ಯಾಕ್ ಅಭಿಯಾನಕ್ಕೆ ಬಿಜೆಪಿ ಕಾರ್ಯಕರ್ತರು ಮತ್ತಷ್ಟು ಶಕ್ತಿ ತುಂಬಿ ಶೆಟ್ಟರ ಬೆಳಗಾವಿ ಅಭ್ಯರ್ಥಿ ಆಗಿರುವದಕ್ಕೆ ಹೆಚ್ಚಿನ ವಿರೋಧ ವ್ಯಕ್ತವಾಗಿದೆ. ಶೆಟ್ಟರ ಬೆಳಗಾವಿಗೆ ಬಂದು ಉಂಡು ಹೋಗಿ ಅಭಿಯಾನ ಇನ್ನಷ್ಟು ತೀವ್ರ ಸ್ವರೂಪ ಪಡೆದಿದ್ದು ಶೆಟ್ಟರ ಹಾಗೂ ಯಡಿಯೂರಪ್ಪ ಅವರ ವ್ಯಂಗ್ಯ ಚಿತ್ರಗಳನ್ನ ಮತ್ತೆ ಬಿಜೆಪಿ ಕಾರ್ಯಕರ್ತರು ಹರಿ ಬಿಟ್ಟಿದ್ದು !!!ಈ ಬಾರಿ ನೀ ಒಬ್ಬ ಹೋದರೇ.. ಬೆಳಗಾವಿ ಶಾಲೆಗಳಲ್ಲಿ ಯಡಿಯೂರಪ್ಪ ಇಲ್ಲದೇ ನಿನ್ನ ಬೆಳಗಾವಿ ಶಾಲೆ ಒಳಗೆ ಬಿಡುವುದಿಲ್ಲ!!! ಎನ್ನುವ ಪೋಸ್ಟರ ಸಖತ್ ವೈರಲ್ ಆಗುತ್ತಿದೆ. ಯಡಿಯೂರಪ್ಪ ಇಲ್ಲದೇ ಶೆಟ್ಟರ ಆಟ ನಡೆಯುವದಿಲ್ಲ ಎನ್ನುವ ಪೋಸ್ಟ ಗಳನ್ನ ಬಿಜೆಪಿ ಕಾರ್ಯಕರ್ತರು ಹರಿಬಿಡುತ್ತಿರುವದು ಬಿಜೆಪಿಗೆ ಶೆಟ್ಟರ ಸ್ಪರ್ದೇ ತಲೆ ನೋವಾಗಿ ಪರಿಣಮಿಸಿದೆ.
ಒಂದು ಕಡೆ ಬೆಳಗಾವಿ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೃನಾಳ ಹೆಬ್ಬಾಳಕರ ಅಬ್ಬರದ ಪ್ರಚಾರದ ನಡುವೆ ಬಿಜೆಪಿ ಪಾಳಯದ ಅಸಮಧಾನ ಕಾಂಗ್ರೆಸ್ ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಒಟ್ಟಿನಲ್ಲಿ ಶೆಟ್ಟರ ಸ್ಪರ್ದೆಗೆ ಬಿಜೆಪಿ ಪಾಳಯದಲ್ಲೆ ವಿರೋಧ ವ್ಯಕ್ತವಾಗಿದ್ದು ಬಿಜೆಪಿ ಪಕ್ಷಕ್ಕೆ ಇನ್ನಷ್ಟು ಮುಜುಗುರಕ್ಕೆ ಎಡೆ ಮಾಡಿಕೊಟ್ಟಿದೆ.