ಮಠದಲ್ಲಿ ಇರಿ ಇಲ್ಲ ಎಲ್ಲಾ ಬಿಟ್ಟು ರಾಜಕೀಯಕ್ಕೆ ಬನ್ನಿ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಆಕ್ರೋಶ. ಪತ್ರಿಕಾಗೋಷ್ಠಿಯ ಬೆನ್ನಲ್ಲೇ ದಿಂಗಾಲೇಶ್ವರ ವಿರುದ್ದ ಭಕ್ತರ ಆಕ್ರೋಶ ಸ್ವಾಮೀಜಿಗಳ ನಡೆ ಪ್ರಶ್ನೆ ಮಾಡಿದ ಭಕ್ತರು.
ಮಠದಲ್ಲಿ ಇರಿ ಇಲ್ಲ ಎಲ್ಲಾ ಬಿಟ್ಟು ರಾಜಕೀಯಕ್ಕೆ ಬನ್ನಿ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಆಕ್ರೋಶ. ಪತ್ರಿಕಾಗೋಷ್ಠಿಯ ಬೆನ್ನಲ್ಲೇ ದಿಂಗಾಲೇಶ್ವರ ವಿರುದ್ದ ಭಕ್ತರ ಆಕ್ರೋಶ ಸ್ವಾಮೀಜಿಗಳ ನಡೆ ಪ್ರಶ್ನೆ ಮಾಡಿದ ಭಕ್ತರು.
ಹುಬ್ಬಳ್ಳಿ –
ಇಂದು ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ನೂರಾರು ಲಿಂಗಾಯತ ಮಠದ ಸ್ವಾಮಿಗಳು ಸಭೆ ನಡೆಸಿ ದೇಶದ ಬೇರೆ ಬೇರೆ ಭಾಗಗಳಲ್ಲಿ ಶಾಸಕರು ಸಂಸದರು ಆಗತಾರೆ,ಈ ಭಾಗದಲ್ಲಿ ಸ್ವಾಮಿಗಳು ನಾವ್ಯಾಕೆ ರಾಜಕೀಯ ಮಾಡಬಾರದು ಎಂಬ ನಿರ್ಣಯ ಕೈಕೊಂಡ ಬೆನ್ನಲ್ಲೇ ಸಾರ್ವಜನಿಕರು ಸ್ವಾಮೀಜಿ ಗಳ ಈ ಒಂದು ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಪತ್ರಿಕಾಗೋಷ್ಠಿ ಮಾಡಿದ ಬೆನ್ನಲ್ಲೇ ಈ ಒಂದು ವಿಚಾರ ಕುರಿತು ಸಾರ್ವಜನಿಕರು ಅದರಲ್ಲೂ ಭಕ್ತರು ಪ್ರಶ್ನೆ ಮಾಡಿದ್ದಾರೆ ಸ್ವಾಮಿಗಳಾದವರು ಮಠದಲ್ಲಿರಬೇಕು.ಇಲ್ಲಾ ಮಠ ಬಿಟ್ಟು ಬಂದು ರಾಜಕೀಯ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ ಅಲ್ಲದೇ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ದಿಂಗಾಲೇಶ್ವರ ಸ್ವಾಮಿಗಳೇ ನಿಮಗೆ ರಾಜಕೀಯ ಮಾಡಲು ಬೇಡಾ ಅನ್ನೋದಿಲ್ಲಾ.ನೀವು ಮಠದ ಪೀಠವನ್ನು ತ್ಯಾಗಮಾಡಿ ಹೊರ ಬನ್ನಿ. ನಿಮ್ಮ ಬಗ್ಗೆ ಭಕ್ತರು ಗೌರವ ಇಟ್ಟುಕೊಂಡಿದ್ದಾರೆ.ಅದಕ್ಕೆ ಮಠದಲ್ಲಿರಿ ಇಲ್ಲಾ ಮಠ ಬಿಟ್ಟು ಬಂದು ರಾಜಕೀಯ ಮಾಡಿ ಎನ್ನುತ್ತಾ ತಮ್ಮ ಆಕ್ರೋಶ ವನ್ನು ಹೊರಹಾಕಿದ್ದಾರೆ.
ಅಲ್ಲದೇ ವೀರಶೈವ ಲಿಂಗಾಯತ ಅಂತಾ ಸಮಾಜವನ್ನು ಎತ್ತಿಕಟ್ಟುವ ಕೆಲಸ ಮಾಡಬೇಡಿ.ನಿಮ್ಮ ವೈಯಕ್ತಿಕ ಹಿತಾಸಕ್ತಿಗೆ ಸಮಾಜ ಬಲಿ ಕೊಡಬೇಡಿ ಎಂದು ದಿಂಗಾಲೇಶ್ವರ ಸ್ವಾಮಿಗಳಿಗೆ ಸಮುದಾಯದವರು ತಿರುಗೇಟು ನೀಡಿದ್ದಾರೆ.
ಒಟ್ಟಾರೆ ಇವತ್ತಿನ ದಿಂಗಾಲೇಶ್ವರ ನಡೆಗೆ ಸಮಾಜ ಬೆಂಬಲಿಸುತ್ತಾ ಅಥವಾ ದಿಂಗಾಲೇಶ್ವರ ಸ್ವಾಮಿಗಳನ್ನ ದೂರ ಇಡತ್ತಾ ಕಾದು ನೋಡಬೇಕಾಗಿದೆ.