ಜೋಶಿ ವಿರುದ್ದ ದಿಂಗಾಲೇಶ್ವರ ಸ್ವಾಮೀಜಿ ಆರೋಪ ಹಿನ್ನಲೆ. ಬಿಜೆಪಿ ಲಿಂಗಾಯತ ನಾಯಕರ ಜೊತೆ ಸಚಿವ ಜೋಶಿ ಮೀಟಿಂಗ್.
ಹುಬ್ಬಳ್ಳಿ:-ದಿಂಗಾಲೇಶ್ವರ ಸ್ವಾಮಿಗಳ ಪತ್ರಿಕಾಗೋಷ್ಠಿ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಬಿಜೆಪಿಯ ಲಿಂಗಾಯತ ಶಾಸಕರು ಮಾಜಿ ಶಾಸಕರು ಹಾಗೂ ಮುಖಂಡರೊಂದಿಗೆ ಸಭೆ ನಡಿಸಿದರು.
ಹುಬ್ಬಳ್ಳಿಯ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಮೀಟಿಂಗ್ನಲ್ಲಿ ಶಾಸಕರಾದ MR ಪಾಟೀಲ್, ಮಹೇಶ್ ಟೆಂಗಿನಕಾಯಿ ,ಮಾಜಿ ಶಾಸಕಿ ಸೀಮಾ ಮಸೂತಿ,ಶಿಸ್ತು ಸಮಿತಿ ಅಧ್ಯಕ್ಷರಾದ ಲಿಂಗರಾಜ್ ಪಾಟೀಲ್ ಜೊತೆ ಪ್ರಹ್ಲಾದ ಜೋಶಿ ತುರ್ತು ಸಭೆ ನಡೆಸಿದರು.
ಪತ್ರಿಕಾಗೋಷ್ಠಿ ನಡೆಸಿ ಜೋಶಿ ಅವರ ಕ್ಷೇತ್ರ ಬದಲಾವಣೆಗೆ ಆಗ್ರಹಿಸಿರೋ ದಿಂಗಾಲೇಶ್ವರ ಸ್ವಾಮೀಜಿ.ಜೋಶಿ ವಿರುದ್ಧ ಕೆಲ ಗಂಭೀರ ಆರೋಪ ಮಾಡಿರೋ ಹಿನ್ನೆಲೆಯಲ್ಲಿ ಮೀಟಿಂಗ್ ನಡೆಸಿದರು ಎನ್ನಲಾಗಿದೆ.