ಜೋಶಿ ವಿರುದ್ದ ದಿಂಗಾಲೇಶ್ವರ ಸ್ವಾಮೀಜಿ ಆರೋಪ.ಅವರು ಏನೇ ಮಾತನಾಡಿದ್ದರೂ ಅದನ್ನ ನಾನು ಆಶೀರ್ವಾದ ಎಂದು ಭಾವಿಸುತ್ತೇನೆಜೋಶಿ.
ಹುಬ್ಬಳ್ಳಿ:-ದಿಂಗಾಲೇಶ್ವರ ಸ್ವಾಮಿಗಳು ಏನೇ ಮಾತನಾಡಿದ್ದರೂ ಅದನ್ನ ಆಶೀರ್ವಾದ ಎಂದು ಭಾವಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರ ಸ್ವಾಮಿಗಳು ಕೇಂದ್ರ ಸಚಿವರನ್ನು ಧಾರವಾಡ ಲೋಕಸಭೆ ಕ್ಷೇತ್ರದಿಂದ ಕೈ ಬಿಡಬೇಕು ಹಾಗೂ ಲಿಂಗಾಯತರನ್ನ ಅವಮಾನಿಸಿದ್ದಾರೆ ಅಂತಾ ಆರೋಪಿಸಿದ್ದರು.
ಅದಕ್ಕೆ ನಾನೇನೂ ಮಾತನಾಡುವುದಿಲ್ಲಾ.ಅವರು ಏನೇ ಹೇಳಿದ್ದರೂ ಅದನ್ನ ಆಶೀರ್ವಾದ ಎಂದು ಭಾವಿಸುತ್ತೇನೆ.ಆ ವಿಚಾರದ ಬಗ್ಗೆ ಹೆಚ್ಚೇನು ಮಾತನಾಡುವುದಿಲ್ಲಾ.ಅವರಿಗಾದ ತಪ್ಪು ಗ್ರಹಿಕೆಯನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಪ್ರಹ್ಲಾದ ಜೋಶಿ ಹೇಳಿದ್ದಾರೆ.