ದಿಂಗಾಲೇಶ್ವರ ಶ್ರೀಗಳಿಗೆ ತಪ್ಪು ಮಾಹಿತಿ ಹೋಗಿರಬಹುದು.ಮೂವರು ಲಿಂಗಾಯತ ಶಾಸಕರ ಅಭಿಪ್ರಾಯ.

Share to all

ದಿಂಗಾಲೇಶ್ವರ ಶ್ರೀಗಳಿಗೆ ತಪ್ಪು ಮಾಹಿತಿ ಹೋಗಿರಬಹುದು.ಮೂವರು ಲಿಂಗಾಯತ ಶಾಸಕರ ಅಭಿಪ್ರಾಯ.

ಹುಬ್ಬಳ್ಳಿ:-ದಿಂಗಾಲೇಶ್ವರ ಶ್ರೀಗಳು ಆಡಿರುವ ಮಾತುಗಳು ತಪ್ಪು ತಿಳವಳಿಕೆಯಿಂದ ಕೂಡಿವೆ.ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರಾಜ್ಯದ ಹಾಗೂ ಸರ್ವರ ಹಿತಕಾಯುವ ಸಜ್ಜನ ರಾಜಕಾರಿಣಿಯಾಗಿದ್ದಾರೆ ಎಂದು ಶಾಸಕರಾದ ಅರವಿಂದ ಬೆಲ್ಲದ,ಮಹೇಶ ಟೆಂಗಿನಕಾಯಿ, ಎಂ ಆರ್ ಪಾಟೀಲ ತಿಳಿಸಿದ್ದಾರೆ.

ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಜೋಶಿ ಅವರು 20 ವರ್ಷಗಳಿಂದ ಈ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.ಅಲ್ಲದೇ ಅವರು ಯಾವದೇ ಸಮಾಜ ಇರಲಿ ತಾರತಮ್ಯ ಮಾಡಿಲ್ಲಾ.ಜೋಶಿ ಅವರು ನಾಡಿನ ಎಲ್ಲ ಮಠ ಹಾಗೂ ಫೀಠಾಧಿಪತಿಗಳನ್ನು ಅತ್ಯಂತ ಗೌರವ ಹಾಗೂ ಭಕ್ತಿ ಭಾವದಿಂದ ಕಂಡಿದ್ದಾರೆ. ದಿಂಗಾಲೇಶ್ವರ ಶ್ರೀಗಳ ಬಗ್ಗೆಯೂ ಅಪಾರ ಗೌರವ ಹೊಂದಿದ್ದಾರೆ ಎಂದಿದ್ದಾರೆ.

ಧಾರವಾಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಿದ್ದ ವೀರಶೈವ ಲಿಂಗಾಯತ ಅಬ್ಯೆರ್ಥಿಗಳ ಗೆಲುವಿಗಾಗಿ ಶ್ರಮಿಸಿದ್ದಾರೆ. ನಾವು ಮೂವರು ಅವರ ನಾಯಕತ್ವದಲ್ಲಿಯೇ ಗೆದ್ದಿದ್ದೇವೆ.ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅದ್ಯಕ್ಷರನ್ನಾಗಿ ವೀರಶೈವ ಲಿಂಗಾಯತರನ್ನೇ ನೇಮಿಸಿದ್ದಾರೆ.ನಾವೆಲ್ಲಾ ಜೋಶಿ ಅವರ ಪರವಾಗಿ ಗಟ್ಟಿಯಾಗಿ ನಿಂತಿದ್ದೇವೆ.

ಶ್ರೀಗಳಿಗೆ ಜೋಶಿ ಅವರ ಬಗ್ಗೆ ಎಲ್ಲೋ ಒಂದು ಕಡೆ ತಪ್ಪು ಮಾಹಿತಿ ಹೋಗಿರಬಹುದು.ನಾವು ದಿಂಗಾಲೇಶ್ವರ ಶ್ರೀಗಳಿಗೆ ಭೇಟಿಯಾಗಿ ಮನವರಿಕೆ ಮಾಡಿಕೊಡುತ್ತೇವೆ ಎಂದು ಮೂವರು ಶಾಸಕರು ಹೇಳಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author