ಕೆಲಸಗಳ ಒತ್ತಡದ ಮದ್ಯೆಯೂ ಸಿಬ್ಬಂದಿಗಳೊಂದಿಗೆ ಬಣ್ಣ ಆಡಿದ ಕಮೀಷನರ್.ಬಣ್ಣ ಎರಚುವ ಮೂಲಕ

Share to all

ಕೆಲಸಗಳ ಒತ್ತಡದ ಮದ್ಯೆಯೂ ಸಿಬ್ಬಂದಿಗಳೊಂದಿಗೆ ಬಣ್ಣ ಆಡಿದ ಕಮೀಷನರ್.ಬಣ್ಣ ಎರಚುವ ಮೂಲಕ ತನ್ನ ನೌಕರರ ಖುಷಿಪಡಿಸಿದ ಆಯುಕ್ತರು.

ಹುಬ್ಬಳ್ಳಿ:-ವಿವಿಧ ಬಣ್ಣಗಳಿಂದ ಕೂಡಿದ ವರ್ಣರಂಜಿತ ಮತ್ತು ಮನರಂಜನೆಯ ಹಬ್ಬವೆಂದರೆ ಹೋಳಿ ಹಬ್ಬ ಈ ಹಬ್ಬವನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.ಜಾತಿ,ಧರ್ಮ,ಮತ,ಅನ್ನದೇ ಎಲ್ಲರೂ ಒಟ್ಟಾಗಿ ಈ ಹಬ್ಬವನ್ನು ಆಚರಿಸುತ್ತಾರೆ.

ಇಂದು ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ:ಈಶ್ವರ ಉಳ್ಳಾಗಡ್ಡಿ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿ ಹಬ್ಬಕ್ಕೆ ಮೆರಗು ತಂದು ಕೊಟ್ಟರಲ್ಲದೇ ತಮ್ಮ ಸಿಬ್ಬಂದಿಗಳಿಗೂ ಬಣ್ಣ ಹಚ್ಚುವ ಮೂಲಕ ಖುಷಿ ಪಡಿಸಿದ್ದಾರೆ.

 

ಸಬ್ಬಂದಿಗಳಿಗೆ ದಿನ ನಿತ್ಯ ಕೆಲಸದ ವಿಷಯದಲ್ಲಿ ವಾರ್ನಿಂಗ್ ಮಾಡುತ್ತಾ ಕೆಲಸ ಮಾಡಿ ಇಲ್ಲಾ ಅಂದರೆ ಸಸ್ಪೆಂಡ್ ಮಾಡತೇನಿ ಅಂತಾ ಸಿಬ್ಬಂದಿಗಳಿಂದ ಕೆಲಸ ಮಾಡಿಸಿಕೊಳ್ಳುವ ಆಯುಕ್ತರು ಇಂದು ಅದೇ ಸಿಬ್ಬಂದಿಗಳೊಂದಿಗೆ ಖುಷಿ ಖುಷಿಯಾಗಿ ಬಣ್ಣ ಎರಚಿ ಕೆಲಸಕ್ಕೂ ಸೈ ಸಂತೋಷ ಪಡುವುದಕ್ಕೂ ಸೈ ಅಂತಾ ಕಮೀಷನರ್ ತೋರಿಸಿಕೊಟ್ಟಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author