ಬಿಜೆಪಿ ಮುಖಂಡ ವೀರೇಶ ಅಂಚಟಗೇರಿ ಸ್ವಾಮೀಜಿಗಳಿಗೆ ಒತ್ತಡ ಹಾಕಿ ಹೇಳಿಕೆ ಕೊಡಿಸಿದರಾ..? ಸ್ವಾಮೀಜಿ ಒತ್ತಡ ಹಾಕಿ ಪತ್ರಕ್ಕೆ ಸಹಿ ಹಾಕಿಸಿದ್ದರು ಅಂತಾ ಸ್ವಾಮೀಜಿ ಹೇಳಿದ್ದು ಯಾಕೆ..?

Share to all

ಬಿಜೆಪಿ ಮುಖಂಡ ವೀರೇಶ ಅಂಚಟಗೇರಿ ಸ್ವಾಮೀಜಿಗಳಿಗೆ ಒತ್ತಡ ಹಾಕಿ ಹೇಳಿಕೆ ಕೊಡಿಸಿದರಾ..? ಸ್ವಾಮೀಜಿ ಒತ್ತಡ ಹಾಕಿ ಪತ್ರಕ್ಕೆ ಸಹಿ ಹಾಕಿಸಿದ್ದರು ಅಂತಾ ಸ್ವಾಮೀಜಿ ಹೇಳಿದ್ದು ಯಾಕೆ..?

ಧಾರವಾಡ:-ಧಾರವಾಡ ಮುರುಘಾಮಠದ ಡಾ; ಮಲ್ಲಿಕಾರ್ಜುನ ಸ್ವಾಮಿಗಳು ನಿನ್ನೆ ಪತ್ರಿಕಾ ಪ್ರಕಟಣೆ ಮತ್ತು ವಿಡಿಯೋ ಹೇಳೆಕೆಯ ಹಿಂದೆ ಬಿಜೆಪಿ ಮುಖಂಡ ವೀರೇಶ ಅಂಚಟಗೇರಿಯ ಕೈವಾಡವಿದೆಯೇ ಎನ್ನುವ ಮಾತುಗಳು ಈಗ ಕೇಳಿ ಬರುತ್ತಿವೆ.

 

ಹೌದು ಕಳೆದ 27 ರಂದು ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿಗಳ ಚಿಂತನ ಮಂಥನ ಸಭೆಯಲ್ಲಿ ಭಾಗವಹಿಸಿ ಮಠಾಧೀಶರು ಕೈಕೊಂಡ ನಿರ್ಣಯಕ್ಕೆ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು ಅನುಮೋಧನೆ ನೀಡಿದ್ದರು.

ನಂತರ ಮರು ದಿನವೇ ಮಲ್ಲಿಕಾರ್ಜುನ ಸ್ವಾಮಿಗಳು ಉಲ್ಟಾ ಹೊಡೆದು ಮೂರುಸಾವಿರ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಗೂ ನಮ್ಮ ಮಠಕ್ಕೂ ಸಂಬಂಧವಿಲ್ಲಾ.ದಿಂಗಾಲೇಶ್ವರ ಹೇಳಿಕೆ ಅವರ ವೈಯಕ್ತಿಕ ಹೇಳಿಕೆ ಅಂತಾ ಹೇಳಿಕೆ ನೀಡಿದ್ದರು. ಆ ಹೇಳಿಕೆಯ ವಿಡಿಯೋ ಮತ್ತು ಪತ್ರಿಕಾ ಹೇಳಿಕೆಯನ್ನ ಸ್ವತ: ಬಿಜೆಪಿ ಮುಖಂಡ ವೀರೇಶ ಅಂಚಟಗೇರಿ ಮಾದ್ಯಮಕ್ಕೆ ಪೋಸ್ಟ್ ಮಾಡಿದ್ದರು.

ಇವತ್ತು ಅದೇ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು ನಿನ್ನೆ ನಾನು ನೀಡಿದ ಹೇಳಿಕೆಯನ್ನ ಕೆಲವರು ಮಠಕ್ಕೆ ಬಂದು ಅವರೇ ಪತ್ರಕ್ಕೆ ಸಹಿ ಮಾಡಿಸಿ ವಿಡಿಯೋ ಹೇಳಿಕೆಯನ್ನು ಒತ್ತಡ ಹಾಕಿ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಹಾಗಾದರೆ ಸ್ವಾಮಿಗಳ ಲೆಟರ್ ಹೆಡ್ ಒತ್ತಾಯ ಪೂರಕವಾಗಿ ಪಡೆದು ಟೈಪ್ ಮಾಡಿಸಿ,ಸಹಿ ಮಾಡಿಸಿ ಅಲ್ಲದೇ ವಿಡಿಯೋ ಮಾಡಿ ಹರಿಬಿಟ್ಟರಾ ವೀರೇಶ ಅಂಚಟಗೇರಿ..ಧಾರವಾಡದ ಮುರುಘಾಮಠದ ಸ್ವಾಮಿಗಳನ್ನ ವೀರೇಶ ಅಂಚಟಗೇರಿ ತಮಗೆ ಬೇಕಾದಂತೆ ಒತ್ತಡ ಹಾಕಿ ಬಳಸಿಕೊಂಡರಾ ಅಥವಾ ಸ್ವಾಮೀಜಿ ಈ ರೀತಿ ನಾಟಕ ಮಾಡಿದರಾ…?

ಎಲ್ಲಾ ವಿಷಯಗಳಿಗೆ ಡಾ: ಮಲ್ಲಿಕಾರ್ಜುನ ಸ್ವಾಮಿಗಳು ಸಾಯಂಕಾಲ ಕರೆಯಲಿದ್ದಾರೆ ಎನ್ನಲಾದ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸತಾರಾ ಕಾದು ನೋಡ ಬೇಕಾಗಿದೆ.

ಉದಯ ವಾರ್ತೆ
ಧಾರವಾಡ


Share to all

You May Also Like

More From Author