ಹುಬ್ಬಳ್ಳಿ:-ದಿಂಗಾಲೇಶ್ವರ ಸ್ವಾಮೀಜಿ ಪತ್ರಿಕಾಗೋಷ್ಠಿ ಮಾಡಿರೋದು ಅಕ್ಷಮ್ಯ ಅಪರಾಧ.ಇದು ಖಂಡನೀಯ ಎಂದು ತಿಪಟೂರು ಷಡಕ್ಷರಿ ಮಠದ ರುದ್ರಮುನಿ.ಸ್ವಾಮೀಜಿ ಹೇಳಿದ್ದಾರೆ.
ವಿಡಿಯೋ ಬಿಡುಗಡೆ ಮೂಲಕ ಹೇಳಿಕೆ ನೀಡಿರುವ ತಿಪಟೂರು ಸ್ವಾಮೀಜಿ ದಿಂಗಾಲೇಶ್ವರ ಅವರು ಚುನಾವಣೆಗೆ ನಿಲ್ಲಬೇಕು ಅನ್ನೋ ಅವರ ಅಪೇಕ್ಷೆ ಇದ್ರೆ, ಸ್ವಾಮೀಜಿ ಕರೆದುಕೊಂಡು ಪತ್ರಿಕಾಗೋಷ್ಠಿ ಮಾಡಿದ್ದಾರೆ.
ಆದ್ರೆ ಪತ್ರಿಕಾಗೋಷ್ಠಿ ಮಾಡೋಕೆ ಸಾಕಷ್ಟು ಜಾಗ ಇತ್ತು.ತಮ್ಮ ಸ್ವಾರ್ಥ ಸಾಧನೆಗೆ ಮೂರು ಸಾವಿರ ಮಠ ಯಾಕೆ. ಬಳಸಿಕೊಂಡರು.ದಿಂಗಾಲೇಶ್ವರ ಸ್ವಾಮೀಜಿ ಪ್ರಲ್ಹಾದ್ ಜೋಶಿ ಅವರ ಬಗ್ಗೆ ಮಾತಾಡಿದ್ದಾರೆ.
ಜೋಶಿ ಲಿಂಗಾಯತ ನಾಯಕರನ್ನು ಕಡೆಗಣಸಿದ್ದು ನೋಡಿಲ್ಲ.ಅವರು ಸಚಿವರಾಗಿ ದೇಶವನ್ನು ಪ್ರತಿನಿಧಿಸಿದ್ದಾರೆ.
ನಮ್ಮ ದೇಶದಲ್ಲಿ ಪ್ರಧಾನಿಗಳು ಜೋಶಿ ಅವರಿಗೆ ಅವಕಾಶ ಕೊಟ್ಟಷ್ಟು ಬೇರಿಗೆ ಯಾರಿಗೂ ಕೊಟ್ಟಿಲ್ಲ ದಿಂಗಾಲೇಶ್ವರ ಸ್ವಾಮೀಜಿ ಜೋಶಿ ಅವರ ಕ್ಷೇತ್ರ ಬದಲಾವಣೆ ಮಾಡಬೇಕು ಅಂತಾರೆ.ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಮಾಡಬೇಕು ಅನ್ನೋದಾದ್ರೆ ಅವರ ಮಠದಲ್ಲಿ ಪತ್ರಿಕಾಗೋಷ್ಠಿ ಮಾಡಲಿ.
ಅದನ್ನ ಬಿಟ್ಟು ಮತ್ತೊಂದು ಮಠಕ್ಕೆ ಹೋಗಿ ಪತ್ರಿಕಾಗೋಷ್ಠಿ ಮಾಡಬಾರದು.
ಮೂರು ಸಾವಿರ ಮಠದಲ್ಲಿ ಪತ್ರಿಕಾಗೋಷ್ಠಿ ಕರೆದಿರೋದು ಕಾನೂನು ಬಾಹಿರ ಎಂದ ಸ್ವಾಮೀಜಿ.