RBI ಆದೇಶ ಹಿನ್ನೆಲೆ.ನಾಳೆ ರವಿವಾರವೂ ಬ್ಯಾಂಕಗಳು ಕಾರ್ಯನಿರ್ವಹಿಸಲಿವೆ.
ಹುಬ್ಬಳ್ಳಿ:-ಪ್ರಸಕ್ತ 2023-24 ಆರ್ಥಿಕ ವರ್ಷದ ಕೊನೆಯ ದಿನವಾಗಿದ್ದರಿಂದ ಮಾಚ್೯ 31 ರ ಭಾನುವಾರದಂದು ದೇಶದ ಎಲ್ಲಾ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ.ಸಾರ್ವಜನಿಕ ಹಾಗೂ ಸರಕಾರದ ಕೆಲಸ,ವ್ಯವಹಾರಗಳನ್ನು ಎಂದಿನಂತೆಯೇ ನಡೆಸಲು RBI ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳು ನಾಳೆಯೂ ಸಹ ಕಾರ್ಯನಿರ್ವಹಿಸಲಿವೆ.
ದೇಶದ ಎಲ್ಲಾ ಬ್ಯಾಂಕುಗಳೂ ತನ್ನ ಎಲ್ಲಾ ಶಾಖೆಗಳೊಡನೆ ಕಾರ್ಯನಿರ್ವಹಿಸುವ ಮೂಲಕ ಸರ್ಕಾರಿ ಕೆಲಸಗಳಿಗೆ ಅನುವು ಮಾಡಿಕೊಡಬೇಕು.ಜೊತೆಗೆ ಸಾರ್ವಜನಿಕರ ವ್ಯವಹಾರಗಳಿಗೂ ಅವಕಾಶ ನೀಡುವುದಲ್ಲದೇ ಈ ಮಾಹಿತಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕೆಂದು RBI ತನ್ನ ಆದೇಶದಲ್ಲಿ ತಿಳಿಸಿದೆ.