ಲೋಕಸಭಾ ಚುನಾವಣೆಯ ಪ್ರಚಾರ ಆರಂಭ ಮಾಡಿದ ಮಾಜಿ ಶಾಸಕ ಅಮೃತ ದೇಸಾಯಿ. ಪ್ರಹ್ಲಾದ್ ಜೋಶಿ ಯವರ ಅಭಿವೃದ್ದಿ ಪುಸ್ತಕಗಳನ್ನು ವಿತರಣೆಯೊಂದಿಗೆ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಪ್ರಚಾರ

Share to all

ಲೋಕಸಭಾ ಚುನಾವಣೆಯ ಪ್ರಚಾರ ಆರಂಭ ಮಾಡಿದ ಮಾಜಿ ಶಾಸಕ ಅಮೃತ ದೇಸಾಯಿ. ಪ್ರಹ್ಲಾದ್ ಜೋಶಿ ಯವರ ಅಭಿವೃದ್ದಿ ಪುಸ್ತಕಗಳನ್ನು ವಿತರಣೆಯೊಂದಿಗೆ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಪ್ರಚಾರ

ಧಾರವಾಡ:-ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾಜಿ ಶಾಸಕ ಅಮೃತ ದೇಸಾಯಿ ಪ್ರಚಾರವನ್ನು ಆರಂಭ ಮಾಡಿದ್ದಾರೆ.

ಹೌದು ಈಗಾಗಲೇ ಅತ್ತ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಇತ್ತ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ.ಈವರೆಗೆ ಧಾರವಾಡ ಜಿಲ್ಲೆಯಲ್ಲಿ ಪ್ರಹ್ಲಾದ್ ಜೋಶಿಯವರು ಕೈಗೊಂಡಿರುವ ಅಭಿವೃದ್ದಿ ಕೆಲಸ ಕಾರ್ಯಗಳನ್ನು ತಿಳಿಸುತ್ತಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನು ಆರಂಭ ಮಾಡಿದ್ದಾರೆ.

ಅದರಲ್ಲೂ ವಿಶೇಷವಾಗಿ ಜೋಶಿಯವರು ಮಾಡಿರುವ ಎಲ್ಲಾ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಒಳಗೊಂಡಿರುವ ಪುಸ್ತಿಕೆಗಳನ್ನು ನೀಡುತ್ತಾ ಅಬ್ಬರದ ಪ್ರಚಾರವನ್ನು ಆರಂಭ ಮಾಡಿದ್ದಾರೆ.ಇದರೊಂದಿಗೆ ಲೋಕಸಭಾ ಚುನಾವಣೆಯ ಅಖಾಡಕ್ಕಿಳಿದಿದ್ದಾರೆ ಮಾಜಿ ಶಾಸಕ ಅಮೃತ ದೇಸಾಯಿ.

ಧಾರವಾಡ ಗ್ರಾಮೀಣ ಮತಕ್ಷೇತ್ರದಲ್ಲಿ ಬರುವ ನರೇಂದ್ರ, ಮಂಗಳಗಟ್ಟಿ,ಮುಳಮುತ್ತಲ, ಲಕಮಪೂರ ಗ್ರಾಮಗಳಲ್ಲಿ ಬೃಹತ್ ಬಹಿರಂಗ ಚುನಾವಣೆ ನರೇಂದ್ರ ಗ್ರಾಮದಲ್ಲಿ ಮಾರ್ಚ್ 31 ರಂದು ಸಾಯಂಕಾಲ 4-00 ಗಂಟೆಗೆ ಆಯೋಜಿಸಿರುವುದರಿಂದ ಪಕ್ಷದ ಪ್ರಮುಖರನ್ನು ಕಾರ್ಯಕರ್ತರನ್ನು ಆಹ್ವಾನಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿಕೊಳ್ಳಲಾಯಿತು ಹಾಗೂ ನಮ್ಮ ಸಂಸದರಾದ ಪ್ರಹ್ಲಾದ ಜೋಶಿಯವರ ಅಭಿವೃದ್ಧಿ ಪುಸ್ತಕವನ್ನು ಜನರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಂಡಳ ಅಧ್ಯಕ್ಷರಾದ ರುದ್ರಪ್ಪ ಅರಿವಾಳ, kmf ಅಧ್ಯಕ್ಷರಾದ ಶಂಕರ ಮುಗದ,ಜಿಲ್ಲಾ
ಮೋರ್ಚಾ ಅಧ್ಯಕ್ಷರು ಶಂಕರ ಕೋಮಾರದೇಸಾಯಿ,ನಿಜಂಗೌಡ ಪಾಟೀಲ್,ಚನ್ನವೀರಗೌಡ ಪಾಟೀಲ,ನಾಗೇಶ್ ಹೊಟ್ಟಿಹೊಳಿ,ಸಂಗಪ್ಪ ಸಬರದ,ಪ್ರಕಾಶ ಮನಿಗೆನಿ,ಗುರುಪಾದ ಗಾಣಿಗೇರ,ಗಂಗಪ್ಪ ಮುಮ್ಮಿಗಟ್ಟಿ,ಹಾಗೂ ಗ್ರಾಮಗಳ ಹಿರಿಯರು ಹಾಗೂ ಯುವ ಮಿತ್ರರು ಹಾಜರಿದ್ದರು.

ಉದಯ ವಾರ್ತೆ
ಧಾರವಾಡ.


Share to all

You May Also Like

More From Author