ಹುಬ್ಬಳ್ಳಿ:-ಕಳೆದ ದಿನಾಂಕ 27 ರಂದು ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ನಡೆದ ಚಿಂತನ ಮಂಥನ ಸಭೆ ನಂತರ ಸ್ವಾಮೀಜಿಗಳಲ್ಲಿ ಬಿರುಕು ಆರಂಭವಾಗಿದ್ದು ಒಬ್ಬೊಬ್ಬರು ಸ್ವಾಮಿಗಳು ಒಂದೊಂದು ಹೇಳಿಕೆ ಕೊಡಲು ಆರಂಭಿಸಿದ್ದಾರೆ.
ಪತ್ರಿಕಾಗೋಷ್ಠಿಗೆ ಅವಕಾಶ ಕೊಟ್ಟ ಮೂರು ಸಾವಿರ ಮಠದ ಸ್ವಾಮೀಜಿಯಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ
ಪ್ರಲ್ಹಾದ್ ಜೋಶಿಗೆ ನಮ್ಮ ವಿರೋಧ ಇಲ್ಲ ಎಂದು ಹೇಳಿದರೆ ಧಾರವಾಡದ ಮುರುಘಾ ಶ್ರೀ ಅಂದು ದಿಂಗಾಲೇಶ್ವರ ಸ್ವಾಮಿಗಳ ಹೇಳಿಕೆ ಅವರ ವೈಕ್ತಿಕ ಎಂದು ನನಗೆ ಒತ್ತಡ ತಂದು ಆ ಹೇಳಿಕೆ ಕೊಡಿಸಿದ್ದರು ಅಂತಾ ಉಲ್ಟಾ ಪಲ್ಟಾ ಹೇಳಿಕೆ ನೀಡಿದ್ದರು.
ಅಲ್ಲದೇ ತಿಪಟೂರಿನ ರುದ್ರಮುನಿ ಸ್ವಾಮಿಗಳೂ ಸಹ ಮೂರುಸಾವಿರ ಮಠವನ್ನು ದಿಂಗಾಲೇಶ್ವರ ಸ್ವಾಮಿಗಳು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ.ಅಲ್ಲದೇ ಪ್ರಹ್ಲಾದ ಜೋಶಿ ಯಾವ ಲಿಂಗಾಯತರಿಗೂ ಅನ್ಯಾಯ ಮಾಡಿಲ್ಲಾ ಎಂದು ಹೇಳಿಕೆ ಕೊಟ್ಟಿದ್ದಾರೆ.
ಇನ್ನು ಬಸನಗೌಡ ಪಾಟೀಲ ಯತ್ನಾಳ ದಿಂಗಾಲೇಶ್ವರ ಅಲ್ಲಾ ಅವರು ದಂಗಲೇಶ್ವರ ಅಂತಾ ಹೇಳಿ ಅವರನ್ನು ಉಳಿದ ಸ್ವಾಮಿಗಳು ಬೆನ್ನು ಹತ್ತಬೇಡಿ ಅಂತಾ ಮನವಿ ಮಾಡುವ ಮೂಲಕ ಪ್ರಹ್ಲಾದ ಜೋಶಿ ಗೆದ್ದೇ ಗೆಲ್ಲುತ್ತಾರೆ ಅಂತಾ ಹೇಳಿದ್ದಾರೆ.
ಸ್ವಾಮೀಜಿಗಳಲ್ಲಿ ಭಿನ್ನಮತ ಆರಂಭವಾಗುತ್ತಲೆ ಇಂದು ಮತ್ತೆ ಸುದ್ದಿಗೋಷ್ಠಿ ಕರೆದಿರುವ
ದಿಂಗಾಲೇಶ್ವರ ಶ್ರೀಗಳು ಅವರೆಲ್ಲಾ ಹೇಳಿಕೆಗೆ ಉತ್ತರ ಕೊಡತಾರಾ ಕಾದು ನೋಡಬೇಕಾಗಿದೆ.