ಪತ್ರಿಕಾಗೋಷ್ಠಿ ನಂತರ ಬೆದರಿಕೆ ಕರೆಗಳು ಬಂದಿವೆ.ಯಾವ ಕರೆಗಳಿಗೂ ಬಗ್ಗಲ್ಲ,ಜಗ್ಗಲ ದಿಂಗಾಲೇಶ್ವರ.ಮುಂದಿಟ್ಟ ಹೆಜ್ಜೆ ಹಿಂದಿಡುವುದಿಲ್ಲಾ.
ಹುಬ್ಬಳ್ಳಿ:- ಹುಬ್ಬಳ್ಳಿಯಲ್ಲಿ ಕಳೆದ 27 ರಂದು ನಡೆಸಿದ ಪತ್ರಿಕಾಗೋಷ್ಠಿ ನಂತರ ನನಗೆ ಬಹುಸಂಖ್ಯಾತ ನಾಯಕರ ಪೋನ್ ಕರೆಗಳು ಬಂದವು.ಅಲ್ಲದೇ ಬೆದರಿಕೆ ಕರೆಗಳೂ ಬಂದವು. ಆದರೆ ನಾನು ಯಾವುದೇ ಪೋನ್ ಕರೆ ಹಾಗೂ ಬೆದರಿಕೆ ಕರೆಗಳಿಗೆ ಬಗ್ಗಲ್ಲ.
ಜೋಶಿ ವಿರುದ್ದ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆನೇ ಇಲ್ಲಾ.ಮುಂದಿಟ್ಟ ಹೆಜ್ಜೆ ಹಿಂದೆ ಇಡಲ್ಲಾ.ಎರಡನೇ ತಾರೀಖು ಸಭೆ ಮಾಡತೇವಿ.ಅದು ಧಾರವಾಡದಲ್ಲಿ ಬೆಳಿಗ್ಗೆ 10-30 ಕ್ಕೆ ಭಕ್ತರ ಸಭೆ ಕರೆಯುತ್ತೇವೆ.ಈಗಾಗಲೇ ಮಠಾಧಿಪತಿಗಳ ಅಭಿಪ್ರಾಯ ಪಡೆದಿದ್ದೇನೆ.ಈಗ ಭಕ್ತರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡುತ್ತೇವೆ.