ನನ್ನ ಹಿಂದೆ ಬಿಜೆಪಿಯವರು ಇದ್ದಾರೆ.ಕಾಂಗ್ರೆಸ್ ನವರೂ ಇದ್ದಾರೆ.ಶೀಘ್ರದಲ್ಲಿಯೇ ಬಹಿರಂಗಕ್ಕೆ ಬರತೀವಿ ದಿಂಗಾಲೇಶ್ವರ.
ಹುಬ್ಬಳ್ಳಿ :-ನನ್ನ ಹಿಂದೆ ಬಹಳ ಜನ ಇದ್ದಾರೆ.ಕಾಂಗ್ರೆಸ್ ನವರೂ ಇದ್ದಾರೆ.ಬಿಜೆಪಿಯವರೂ ಇದ್ದಾರೆ.ಅಲ್ಲದೇ ಬಹಳ ಜನ ನನ್ನನ್ನು ಸಂಪರ್ಕ ಮಾಡಿದ್ದಾರೆ.ಅವರ ಹೆಸರನ್ನ ಹೇಳುವುದಿಲ್ಲಾ ಎಂದು ದಿಂಗಾಲೇಶ್ವರ ಸ್ವಾಮಿಗಳು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ ಅಥವಾ ಯಾರನ್ನಾದರೂ ನಿಲ್ಲಿಸುತ್ತೇನೆ ಅಂತಾ ಎಲ್ಲಿಯೂ ಹೇಳಿಲ್ಲಾ.ಆದರೆ ಮಠಾಧೀಶರ,ಭಕ್ತರ ಆಸೆ ನಾನು ಚುನಾವಣೆಗೆ ನಿಲ್ಲಬೇಕು ಎಂಬ ನಿಲುವನ್ನ ಸ್ಪಷ್ಟಪಡಿಸಿದ್ದಾರೆ.ಅದೆಲ್ಲದಕ್ಕೂ ಉತ್ತರವನ್ನ ಅದಷ್ಟು ಶೀಘ್ರದಲ್ಲಿ ಹೇಳುತ್ತೇವೆ ಎಂದಿದ್ದಾರೆ.
ನಾನು ತೆಗೆದುಕೊಳ್ಳುವ ನಿರ್ಧಾರ ಧಾರವಾಡ ಜಿಲ್ಲೆಗೆ ಮಾತ್ರವಲ್ಲಾ.ನನ್ನ ನಿಲುವು ರಾಜ್ಯ ಮತ್ತು ರಾಷ್ಟ್ರಕ್ಕೆ ಪರಿಣಾಮ ಉಂಟು ಮಾಡುತ್ತೇ ಅಂತಾ ಸ್ವಾಮೀಜಿ ಹೇಳಿದ್ದಾರೆ.