ಹುಬ್ಬಳ್ಳಿಯಲ್ಲಿ IPL ಹಬ್ಬ.ತನಿಖಾದಳದ ಕುರಿಯೊಂದು ಕಂಡ ಕಂಡಲ್ಲಿ ಹಾಕತಾ ಇದೆ ಬಾಯಿ.ಖಡಕ್ ಇನಸ್ಪೆಕ್ಟರ್ ಕಟ್ಟಿ ಹಾಕ್ತಾರಾ ಹರಕು ಬಾಯಿಯ ಮೇಕೆಯನ್ನ.
ಹುಬ್ಬಳ್ಳಿ:- ಹೌದು IPL ಅಂದರೆ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬವಾದರೆ.ಕಂಡ ಕಂಡಲ್ಲಿ ಬಾಯಿ ಹಾಕುವ ತನಿಖಾದಳದ ಕುರಿ ಹಿಂಡಿಗೆ IPL ಬರಗಾಲದಲ್ಲಿ ಮಳೆ ಬಂದಂಗಾಗಿದೆ.
ಕಳೆದ ಒಂದು ವಾರದ ಹಿಂದೆ ಹುಬ್ಬಳ್ಳಿ ಇಂಡಿ ಪಂಪ ಹತ್ತಿರ ಕುರಿ ಹಿಡಿದುಕೊಂಡು ಹೋದ ಗೌಡ್ರು ಹಳೇಹುಬ್ಬಳ್ಳಿಯ ಚನ್ನಪೇಟೆಗೆ ನುಗ್ಗಿ ದತ್ತು ಸೋ..ಕಿ (ಸಾವಜಿ)ಯನ್ನು ಹಿಡಿದು ಪ್ರಕರಣ ದಾಖಲು ಮಾಡಿದ್ದಲ್ಲದೇ ಲಕ್ಷ ಲಕ್ಷ ಪ್ರಸಾದ ಪಡೆದಿದ್ದಾರೆ.
ದೂರು ದಾಖಲು ಮಾಡಿ ಪ್ರಸಾದವನ್ನು ಪಡೆಯುವ ಗೌಡ್ರ,ಕುರಿಯ ಚಾಣಾಕ್ಷತನ ಮೆಚ್ಚಲೇ ಬೇಕು.ಇದು ಇಂದು ಸ್ಯಾಂಪಲ್ ಮಾತ್ರ ಹುಬ್ಬಳ್ಳಿಯ ಈ ತನಿಖಾ ದಳದಲ್ಲಿ ಇರುವ ಬಹುತೇಕರು ಕಂಡ ಕಂಡಲ್ಲಿ ಬಾಯಿ ಹಾಕಿ IPL ಹಬ್ಬ ಮಾಡೋರೇ ಇದ್ದಾರೆ.
ಮೇಲಾಧಿಕಾರಿಗಳು ಖಡಕ್ ಆಗಿದ್ದು.ಬೆಟ್ಟಿಂಗ್ ಕೇಸ್ ಮಾಡಿ ಅಂತಾ ಬೆನ್ನತ್ತಿದ್ದೇ ತಡ.ಆ ಕುರಿ ಹಿಂಡು ಕೇಸ್ ಮಾಡುವುದು ಅಧಿಕಾರಿಗಳಿಂದ ಬೆಸ್ಟ್ ಅಂತಾ ಅನಿಸಿಕೊಳ್ಳುವುದು.ಇತ್ತ ಪ್ರಸಾದ ಪಡೆಯುವುದು ಕಾಮನ್ ಆಗಿದೆ.
ಈ ತನಿಖಾ ದಳದ ಟೀಂ ಕಣ್ಮುಚ್ಚಿ ಹಾಲು ಕುಡಿದರೆ ಯಾರೂ ನೋಡೇ ಇಲ್ಲಾ ಅಂದುಕೊಂಡಿರುತ್ತಾರೆ.ಆದರೆ ಎಲ್ಲರೂ ನೋಡಿರುತ್ತಾರೆ ಅನ್ನೋದ ಅವರಿಗೆ ಗೊತ್ತೇ ಇರುವುದಿಲ್ಲ.
ಈ ಕುರಿತು ಕಳೆದ ರವಿವಾರ ಉದಯ ವಾರ್ತೆ ಕುರಿಗಳು ಮೇಡಂ ಕುರಿಗಳು ಅಂತಾ ವರದಿ ಮಾಡಿತ್ತು.