ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಸನ್ಮಾನ.ಮತ್ತೊಮ್ಮೆ ಆಯ್ಕೆಗೆ ಪಣ ತೊಟ್ಟ ಕಾರ್ಯಕರ್ತರು.
ಹುಬ್ಬಳ್ಳಿ:- ಇಂದು ಕಲಘಟಗಿ ತಾಲೂಕಿನ ಬೂದನಗುಡ್ಡ ಬಸವೇಶ್ವರ ದೇವಸ್ಥಾನದಲ್ಲಿ ಕಾಡನಕೊಪ್ಪ ಶಿವಾಜಿ ಯುವಕ ಮಂಡಳ ಹಾಗೂ ಕಲಘಟಗಿ ಗ್ರಾಮದ ಯುವಕರು ಬಿಜೆಪಿ ಯುವ ಮುಖಂಡ ಅಣ್ಣಪ್ಪ ಗೋಕಾಕ ನೇತೃತ್ವದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಗೆ ಸನ್ಮಾನಿಸಿ ನಮ್ಮ ಓಟು ನಿಮಗೆ ಎಂದು ಘೋಷಣೆ ಕೂಗಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಇಂದು ಬೂದನಗುಡ್ಡದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಶನದಲ್ಲಿ ಕಲಘಟಗಿ ಮತ್ತು ಕಾಡನಕೊಪ್ಪ ಗ್ರಾಮದ ಶಿವಾಜಿ ಯುವಕ ಮಂಡಳದ ನೂರಾರು ಯುವಕರನ್ನು ಕರೆದುಕೊಂಡು ಹೋದ ಅಣ್ಣಪ್ಪ ಗೋಕಾಕ ಸಚಿವ ಜೋಶಿಯವರನ್ನು ಭೇಟಿ ಮಾಡಿಸಿದರು.
ಬಿಡುವಿಲ್ಲದ ಕಾರ್ಯಕ್ರಮದ ಮದ್ಯೆಯೂ ಕಾರ್ಯಕರ್ತರೊಂದಿಗೆ ಕೆಲಹೊತ್ತು ಮಾತನಾಡಿದ ಜೋಶಿ ಅವರು ಎಲ್ಲರೂ ಒಟ್ಟಾಗಿ ಚುನಾವಣೆ ಮಾಡಿ.ನಿಮ್ಮ ಜೊತೆಗೆ ನಾನಿದ್ದೇನೆ ಎಂದು ಭರವಸೆ ನೀಡಿದರು.