ಹಾಸ್ಟೆಲ್ ನಲ್ಲಿ ಓದಿ.ಕಲಾ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿ.ವಿದ್ಯಾರ್ಥಿನಿಗೆ ಸನ್ಮಾನಿಸಿದ ಡಿಸಿ ಮತ್ತು ಸಮಾಜ ಕಲ್ಯಾಣ ಇಲಾಖೆ.
ಧಾರವಾಡ:-ಆ ಹುಡುಗಿ ಬಡತನದಲ್ಲಿ ಬೆಳೆದು SSLC ಮುಗಿಸಿ ಧಾರವಾಡಕ್ಕೆ ಬಂದು ಪಿಯುಸಿ ಪ್ರವೇಶ ಪಡೆದು ಹಾಸ್ಟೆಲ್ ಗಾಗಿ ಅಲೆದಾಡುತ್ತಿದ್ದಾಗ ಹಾಸ್ಟೆಲ್ ಪ್ರವೇಶ ಒದಗಿಸಿ ಕೊಟ್ಟ ಧಾರವಾಡ ತಾಲೂಕಾ ಸಮಾಜ ಕಲ್ಯಾಣ ಇಲಾಖೆಗೆ ಈಗ ಒಂದು ಹ್ಯಾಟ್ಸ್ ಅಪ್ ಹೇಳಲೇಬೇಕು.
ಧಾರವಾಡ ತಾಲೂಕಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ತಾಲೂಕಾ ಅಧಿಕಾರಿಯಾಗಿರುವ ಶ್ರೀಮತಿ ಎಂ.ಬಿ.ಸಣ್ಣೇರ ಅವರ ಶ್ರಮದಿಂದ ಇವತ್ತು ಅವರ ವ್ಯಾಪ್ತಿಯ ಡಾ: ಬಿ.ಆರ್.ಅಂಬೇಡ್ಕರ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ನಂ:-3 ರ ಕುಮಾರಿ ರವೀನಾ ಲಮಾಣಿ 2024 ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳಿಗೆ 595 ಅಂಕ ಪಡೆಯುವ ಮೂಲಕ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಹಾಗೂ ಧಾರವಾಡ ಜಿಲ್ಲೆಗೆ ಮೊದಲ ಸ್ಥಾನ ಪಡೆದು ಇಲಾಖೆಗೆ ಕೀರ್ತಿ ತಂದಿದ್ದಾಳೆ.
ಸದರಿ ವಿದ್ಯಾರ್ಥಿನಿಗೆ ಧಾರವಾಡ ಜಿಲ್ಲಾಧಿಕಾರಿ ಶ್ರೀಮತಿ ದಿವ್ಯಪ್ರಭು.ಜಂಟಿ ನಿರ್ಧೇಶಕರಾದ ಶ್ರೀಮತಿ ಪಿ.ಶುಭ ಮತ್ತು ಸಹಾಯಕ ನಿರ್ಧೇಶಕರಾದ ಶ್ರೀಮತಿ ಎಂ ಬಿ ಸಣ್ಣೇರ ಹಾಗೂ ವಸತಿ ನಿಲಯದ ವಾಡ್೯ ನ್ ಶ್ರೀಮತಿ ಸಲ್ಮಾ ನಧಾಪ ಇವರು ಸನ್ಮಾನಿಸಿ ಶುಭ ಹಾರೈಸಿದರು.