ದಿಂಗಾಲೇಶ್ವರ ಸ್ವಾಮಿಗಳಿಗೆ ಭವ್ಯ ಸ್ವಾಗತ.ಮೆರವಣಿಗೆ ಮೂಲಕ ಹುಬ್ಬಳ್ಳಿಯಲ್ಲಿ ವೆಲ್ ಕಮ್.

Share to all

ದಿಂಗಾಲೇಶ್ವರ ಸ್ವಾಮಿಗಳಿಗೆ ಭವ್ಯ ಸ್ವಾಗತ.ಮೆರವಣಿಗೆ ಮೂಲಕ ಹುಬ್ಬಳ್ಳಿಯಲ್ಲಿ ವೆಲ್ ಕಮ್.

ಹುಬ್ಬಳ್ಳಿ:- ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಬ್ಯೆರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ ನಂತರ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸುತ್ತಿರುವ ಶಿರಹಟ್ಟಿ ಶ್ರೀ ಫಕೀರ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳಿಗೆ ಇಂದು ಹುಬ್ಬಳ್ಳಿಯಲ್ಲಿ ಮೆರವಣಿಗೆ ಮೂಲಕ ಭಕ್ತ ಸಮೂಹ ಬರಮಾಡಿಕೊಳ್ಳಲಿದೆ.

ಇಂದು ಸಾಯಂಕಾಲ 4-00 ಘಂಟಗೆ ಹುಬ್ಬಳ್ಳಿ ನೆಹರೂ ಮೈದಾನದಿಂದ ಮೂರುಸಾವಿರ ಮಠದವರೆಗೆ ಭವ್ಯ ಮೆರವಣಿಗೆ ನಡೆಸಲಿದ್ದು ಜಿಲ್ಲೆಯ ಹಲವು ಕಡೆಗಳಿಂದಲೂ ಭಕ್ತರು ಆಗಮಿಸಿ ಅವರ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ದಿಂಗಾಲೇಶ್ವರ ಸ್ವಾಮಿಗಳು ಸ್ಪರ್ಧೆ ಖಚಿತವಾಗುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಅಬ್ಯೆರ್ಥಿಗಳನ್ನು ನಿದ್ದೆಗೆಡಿಸಿದ್ದಂತೂ ಸತ್ಯ.ದಿಂಗಾಲೇಶ್ವರ ಸ್ವಾಮಿಗಳು ಲಿಂಗಾಯತ ಮತಗಳನ್ನು ಹೆಚ್ಚಿಗೆ ಪಡೆದರೆ ಬಿಜೆಪಿಗೆ ನಷ್ಟ.ಅಹಿಂದ ಮತಗಳನ್ನು ಸ್ವಾಮೀಜಿಗಳು ಹೆಚ್ಚಿಗೆ ಪಡೆದರೆ ಕಾಂಗ್ರೆಸ್ ಗೆ ನಷ್ಟ.

ಇದೆಲ್ಲದರ ಮದ್ಯೆ ದಿಂಗಾಲೇಶ್ವರ ಸ್ವಾಮಿಗಳು ಎರಡೂ ರಾಜಕೀಯ ಪಕ್ಷಗಳನ್ನು ಸೋಲಿಸಿ ನಾನೇ ಆಯ್ಕೆಯಾಗುತ್ತೇನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author