ಮೋದಿಯವರೇ ಸುಳ್ಳು ಹೇಳೋದನ್ನ ನಿಲ್ಲಿಸಿ.ಬಿಜೆಪಿ ವಿರುದ್ಧ ಹರಿಹಾಯ್ದ ಸಚಿವ ಸಂತೋಷ ಲಾಡ್.

Share to all

ಮೋದಿಯವರೇ ಸುಳ್ಳು ಹೇಳೋದನ್ನ ನಿಲ್ಲಿಸಿ.ಬಿಜೆಪಿ ವಿರುದ್ಧ ಹರಿಹಾಯ್ದ ಸಚಿವ ಸಂತೋಷ ಲಾಡ್.

ಹುಬ್ಬಳ್ಳಿ:-ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ವಿಶ್ವಮಾನವ ದಿನಾಚರಣೆ ಹಾಗೂ ಅಂಬೇಡ್ಕರ್, ಬಸವಣ್ಣನವರ ಕುರಿತ ವಿಶೇಷ ಗೀತೆಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಚಿವ ಸಂತೋಷ ಲಾಡ್ ಮುಸ್ಲಿಂರಿಗೆ ಪದೇ ಪದೇ ಪಾಕಿಸ್ತಾನಕ್ಕೆ ಹೋಗಿ ಅಂತಾ ಹೇಳಬೇಡಿ.ದೇಶ ವಿಭಜನೆ ಆದ ಮೇಲೆ ಇಲ್ಲಿ ಉಳಿದವರು ನಮ್ಮವರೇ.

ದೇಶ ವಿಭಜನೆ ಆಗೋಕ್ಕೆ ನೆಹರು ಕಾರಣ ಅಂತಾ ಬಿಜೆಪಿಯವರು ಟೀಕಿಸುತ್ತಾರೆ.ಬಿಜೆಪಿಯವರು ನೆಹರು ಅವರಿಗೆ ಧನ್ಯವಾದ ಹೇಳಬೇಕು.ಅಲ್ಲಿಗೆ ಹೋಗುವವರು ಹೋದರು.ಇಲ್ಲಿ ಉಳಿದವರು ಉಳಿದರು.ಉಳಿದವರು ನಮ್ಮವರು.ಪದೇ ಪದೇ ಪಾಕಿಸ್ತಾನಕ್ಕೆ ಹೋಗಿ ಅಂತಾ ಹೇಳಬೇಡಿ ಅಂತಾ ಬಿಜೆಪಿ ವಿರುದ್ಧ ಹರಿಹಾಯ್ದರು.

ಅಲ್ಲದೇ ನಮ್ಮ ಕಾಂಗ್ರೆಸ್ ಅಬ್ಯೆರ್ಥಿ ವಿನೋದ ಅಸೂಟಿ ಅವರನ್ನ ಬೆಂಬಲಿಸಿ ಸಂಸತ್ತಿಗೆ ಕಳಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author