ಧಾರವಾಡ ಲೋಕಸಭೆ: ಕಾಂಗ್ರೆಸ್‌ ವಿನೋದ್‌ ಅಸೂಟಿ ನಾಮಪತ್ರ ಸಲ್ಲಿಕೆ.ಬೃಹತ್‌ ರೋಡ್‌ ಶೋ, ಜನಸಾಗರ

Share to all

ಧಾರವಾಡ ಲೋಕಸಭೆ: ಕಾಂಗ್ರೆಸ್‌ ವಿನೋದ್‌ ಅಸೂಟಿ ನಾಮಪತ್ರ ಸಲ್ಲಿಕೆ.ಬೃಹತ್‌ ರೋಡ್‌ ಶೋ, ಜನಸಾಗರ

ಧಾರವಾಡ:- ಧಾರವಾಡ ಲೋಕಸಭೆಯ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಅವರು ಇಂದು ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ನಂತರ ಧಾರವಾಡದ ಶಿವಾಜಿ ವೃತ್ತದಿಂದ ಬೃಹತ್‌ ರೋಡ್‌ ಶೋ ನಡೆಸಿದರು.

ಈ ರೋಡ್‌ ಶೋನಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಪಕ್ಷದ ಬಾವುಟಗಳನ್ನು ಹಿಡಿದ ಕಾರ್ಯಕರ್ತರು ಮೆರವಣಿಗೆಯ ಕಳೆಯನ್ನು ಹೆಚ್ಚಿಸಿದರು. ಕಿಕ್ಕಿರಿದು ಸೇರಿದ್ದ ಜನಸಮೂಹ ಅಸೂಟಿ ಅವರನ್ನು ಬೆಂಬಲಿಸಿದರು. ವಾದ್ಯಗೋಷ್ಠಿಯ ನಡುವೆ ಜನರು ತಮ್ಮ ಮೆಚ್ಚಿನ ನಾಯಕನಿಗೆ ಹಾರೈಸಿ ಹೆಜ್ಜೆ ಹಾಕಿದರು.

ಬಿಸಲ ಝಳ ಹೆಚ್ಚಿದ್ದರೂ ಭಾರಿ ಸಂಖ್ಯೆಯಲ್ಲಿ ಜನ ಸೇರಿ ಅಭಿಮಾನ ವ್ಯಕ್ತಪಡಿಸಿದರು.

ವಿನೋದ್‌ ಅಸೂಟಿ ಅವರಿಗೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌, ಶಾಸಕರಾದ ಎನ್‌ ಎಚ್‌ ಕೋನರಡ್ಡಿ, ಪ್ರಸಾದ್‌ ಅಬ್ಬಯ್ಯ ಹಾಗೂ ವಿಧಾನ ಪರಿಷತ್‌ ಸದಸ್ಯರಾದ ಸಲೀಂ ಅಹಮದ್‌, ಕಾಂಗ್ರೆಸ್‌ ಮುಖಂಡರಾದ ವಿಜಯ್‌ ಕುಲಕರ್ಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳಾದ ಶ್ರೀ ಅನಿಲ್ ಕುಮಾರ್ ಪಾಟೀಲ್ ಹಾಗೂ ಶ್ರೀ ಅಲ್ತಾಫ್ ಹಳ್ಳೂರ್ ಜೊತೆಗಿದ್ದು ಶುಭ ಹಾರೈಸಿದರು.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author