ಕನ್ನಡ ಚಿತ್ರರಂಗಕ್ಕೆ ಚೈತನ್ಯ ತುಂಬಿದ್ದರು ದ್ವಾರಕೀಶ್. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಂತಾಪ.
ಹುಬ್ಬಳ್ಳಿ: ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಕನ್ನಡ ಚಿತ್ರ ರಂಗಕ್ಕೆ ಚೈತನ್ಯ ಶಕ್ತಿ ಆಗಿದ್ದರು ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಸ್ಮರಿಸಿದ್ದಾರೆ.
ದ್ವಾರಕೀಶ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಹಾಗೂ ಕರುನಾಡಿಗೆ ದೊಡ್ಡ ನಷ್ಟವಾಗಿದೆ ಎಂದು ಜೋಶಿ ಸಂತಾಪ ವ್ಯಕ್ತಪಡಿಸಿ ಟ್ವಿಟ್ ಮಾಡಿದ್ದಾರೆ.
ದ್ವಾರಕೀಶ್ ಕನ್ನಡ ಚಿತ್ರರಂಗಕ್ಕೆ ಹೊಸ ಭಾಷ್ಯ ಬರೆದಿದ್ದಾರೆ. ಕಲೆಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಬದುಕಿನಲ್ಲಿ ಏನೇ ಏರಿಳಿತ ಕಂಡರೂ ಒಬ್ಬ ಪ್ರಜ್ಞಾವಂತ ಹಾಸ್ಯ ಕಲಾವಿದರಗಿ ಜನರನ್ನು ನಗಿಸುವ, ರಂಜಿಸುವ ಕೆಲಸ ಮಾಡಿದ್ದಾರೆ ಎಂದಿದ್ದಾರೆ.
ಚಿತ್ರರಂಗದಲ್ಲಿ ಯಶಸ್ಸು ಮತ್ತು ಸೋಲನ್ನು ಸಮಾನವಾಗಿ ಸ್ವೀಕರಿಸಿದ ದ್ವಾರಕೀಶ್ ಅವರ ಅಗಲಿಕೆ ತೀವ್ರ ನೋವುಂಟು ಮಾಡಿದೆ ಎಂದ ಸಚಿವ ಜೋಶಿ, ದ್ವಾರಕೀಶ್ ಅವರ ಕುಟುಂಬ ಮತ್ತು ಕಲಾ ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿ ಭರಿಸುವಂತೆ ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ.