ಹುಬ್ಬಳ್ಳಿ ಕಿಮ್ಸ್ ನಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮ.ಪಾಲಿಕೆಯ ಆಯುಕ್ತ ಡಾ: ಈಶ್ವರ ಉಳ್ಳಾಗಡ್ಡಿ ಭಾಗಿ.
ಹುಬ್ಬಳ್ಳಿ:-ಇಂದು ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಹುಬ್ಬಳ್ಳಿಯಲ್ಲಿ ಮತದಾನದ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಈ ಒಂದು ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲಿಕೆಯ ಆಯುಕ್ತ ಡಾ: ಈಶ್ವರ ಉಳ್ಳಾಗಡ್ಡಿ ಮಾತನಡಿ ಪ್ರಜಾಪ್ರಭುತ್ವದಲ್ಲಿ ಮತದಾನ ಬಹಳ ಮುಖ್ಯ.ನಮ್ಮ ಓಟು ನಮ್ಮ ಹಕ್ಕು.ಎಲ್ಲರೂ ತಪ್ಪದೆ ಮತ ಚಲಾಯಿಸಿ ಎಂದು ಕಿಮ್ಸ್ ವಿದ್ಯಾರ್ಥಿಗಳಿಗೆ ಹೇಳಿದರು.
ಈ ಒಂದು ಕಾರ್ಯಕ್ರಮದಲ್ಲಿ ಜಿಲ್ಲಾ SVEEP ನೋಡೆಲ್ ಅಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಜಿಲ್ಲಾ ಪಂಚಾಯತ್ ಶ್ರೀಮತಿ ಸ್ವರೂಪ ಕೆ ಟಿ,BRTS ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಿವಾನಂದ ಭಜಂತ್ರಿ, ಸಹಾಯಕ ಚುನಾವಣಾಧಿಕಾರಿಗಳಾದ ಹಾಗೂ ಪಾಲಿಕೆಯ ಆಯುಕ್ತರಾದ ಶ್ರೀ ಡಾ ಈಶ್ವರ ಉಳ್ಳಾಗಡ್ಡಿ ,KIMS ನ ಹಿರಿಯ ಹಾಗೂ ಕಿರಿಯ ವೈದ್ಯಾಧಿಕಾರಿಗಳು, ಹಾಗೂ ವಿಧ್ಯಾರ್ಥಿ, ವಿಧ್ಯಾರ್ಥಿನಿಯರು ಪಾಲ್ಗೊಂಡಿದ್ದರು.